ಅಮೆರಿಕ ಮತ್ತು ರಷ್ಯಾದ ಸ್ಲೇಥ್ (ಅತ್ಯಾಧುನಿಕ ಯುದ್ಧ ವಿಮಾನ) ಮೊದಲ ಬಾರಿ ಮುಖಾಮುಖಿ ಆಗುವ ಮೂಲಕ ಬೆಂಗಳೂರಿನಲ್ಲಿ ಸೋಮವಾರ ಆರಂಭಗೊಂಡ ಅತೀ ದೊಡ್ಡ ಏರ್ ಶೋನಲ್ಲಿ ಪ್ರಮುಖ ಆಕರ್ಷಣೆ ಪಡೆದವು.
ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಸೋಮವಾರ 15ನೇ ಆವೃತ್ತಿಯ ಏರ್ ಶೋ ಆರಂಭಗೊಂಡಿತು. ರಷ್ಯಾದ ಎಸ್ ಯು-57 ಹಾಗೂ ಅಮೆರಿಕದ ಎಫ್-35 ಲೈಟ್ನಿಂಗ್ -2 ಸ್ಲೇಥ್ ಯುದ್ಧ ವಿಮಾನಗಳು ಎದುರು ಬದುರು ನಿಲ್ಲಿಸಲಾಗಿದ್ದು, ಮೊದಲ ಬಾರಿ ಮುಖಾಮುಖಿಯಾಗಿ ಕಾಣಿಸಿಕೊಂಡವು.
5ನೇ ತಲೆಮಾರಿನ ಯುದ್ಧ ವಿಮಾನಗಳಾಗಿದ್ದು, ಏರ್ ಶೋ ವೀಕ್ಷಿಸಿದವರಿಗೆ ಇದು ಅಪರೂಪದ ದರ್ಶನ ಆಗಿದೆ. ಅಲ್ಲದೇ ವೈಮಾನಿಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ಮಿಂಚಿನಂತೆ ಸಂಚರಿಸುವುದು ಮಾತ್ರವಲ್ಲ, ಕ್ಷಣಾರ್ಧದಲ್ಲಿ ಮಾಯವಾಗಿ ದಾಳಿ ನಡೆಸಬಲ್ಲ ಚಾಣಕ್ಷ ವಿಮಾನಗಳಾಗಿವೆ.
ರಷ್ಯಾ ಮತ್ತು ಅಮೆರಿಕದ ಈ ಅತ್ಯಾಧುನಿಕ ಯುದ್ಧ ವಿಮಾನಗಳು ೪ ದಿನಗಳ ಕಾಲ ಏರ್ ಶೋನಲ್ಲಿ ಪ್ರದರ್ಶನ ನೀಡಲಿವೆ. ರಷ್ಯಾದ ಯುದ್ಧ ವಿಮಾನ ಪ್ರದರ್ಶನದ ವೇಳೆ ಯಲಹಂಕ ವಾಯುನೆಲೆಯ ಚಿತ್ರವನ್ನು ಸೆರೆ ಹಿಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.