ರಾತ್ರಿ ಮಲಗಿದ್ದಾಗ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ಐದು ಸದಸ್ಯರು ಮೃತಪಟ್ಟಿದ್ದಾರೆ. ಬಿಹಾರ ದಾನಾಪುರದ ದಿಯಾರಾ ಕಿಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾನಸ್ ನಯಾ ಪಣಾಪುರ 42 ಪಟ್ಟಿ ಎಂಬ ಸ್ಥಳದಲ್ಲಿ ಈ ದುರಂತ ನಡೆದಿದೆ.
ಮನೆಯ ಮಾಲೀಕ ಬಬ್ಬು ಖಾನ್ (40), ಪತ್ನಿ ರೋಷನ್ ಖಾತೂನ್ (35), ಮೂವರು ಮಕ್ಕಳು ಅಸು ನೀಗಿದ್ದಾರೆ. ಹನ್ನೆರಡು ವರ್ಷದ ಪುತ್ರಿ ರುಕ್ಸಾರ್, ಎರಡು ವರ್ಷದ ಚಾಂದನಿ, ಮತ್ತು ಹತ್ತು ವರ್ಷದ ಮೊ ಚಂದ್ ಮೃತಪಟ್ಟಿರುವ ಮಕ್ಕಳು.
ರಾತ್ರಿ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಮನೆಯಲ್ಲಿದ್ದ ಐವರೂ ಕುಸಿದ ಅವಶೇಷಗಳ ಕೆಳಗೆ ಸಿಕ್ಕಿಹಾಕಿಕೊಂಡರು. ನೆರೆಹೊರೆಯವರು ಶಬ್ದ ಮತ್ತು ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಅವಶೇಷಗಳಿಂದ ಸಜೀವವಾಗಿ ವ್ಯಕ್ತಿಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಐದು ಜನರ ದೇಹಗಳನ್ನು ಮರಣೋತ್ತರ ಪರೀಕ್ವೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದೆಂದು ಪತ್ನಿಯ ಕೊಲೆ
ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡ ಬರಬಾರದು ಎಂದು ಪತಿ ಆಕೆಯನ್ನು ಕೊಲೆ ಮಾಡಿ ಪೊಲೀಸ್ ಅತಿಥಿಯಾಗಿದ್ದಾನೆ. ಮಹಾರಾಷ್ಟ್ರದಲ್ಲಿ ಪ್ರಕರಣ ನಡೆದಿದ್ದು, ಕೊಲೆ ಆರೋಪಿಯನ್ನು
ಸಮೀರ್ ಜಾಧವ್ ಎಂದು ಗುರುತಿಸಲಾಗಿದ್ದು, ಪತ್ನಿ ಅಂಜಲಿ ಸಮೀರ್ ಜಾಧವ್ (38) ಕೊಲೆಯಾದವರು.
2017 ರಲ್ಲಿ ಮದುವೆಯಾಗಿದ್ದು, ಜಾಧವ್ ಗ್ಯಾರೇಜ್ ನಡೆಸುತ್ತಿದ್ದ. ಅಜಯ್ ದೇವಗನ್ ಅಭಿನಯದ ದೃಶ್ಯಂ ಚಿತ್ರವನ್ನು ಕನಿಷ್ಠ ನಾಲ್ಕು ಬಾರಿ ನೋಡಿದ ನಂತರ ಕೊಲೆಯನ್ನು ಯೋಜಿಸಿದ್ದಾಗಿ ಆರೋಪಿ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ದಂಪತಿ ಪುಣೆಯ ಶಿವಾನೆ ಪ್ರದೇಶದಲ್ಲಿ ವಾಸಿಸುತ್ತಿದ್ದರು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಅಕ್ಟೋಬರ್ 26 ರಂದು ಜಾಧವ್ ಹೆಂಡತಿಯನ್ನು ತಾನು ಬಾಡಿಗೆಗೆ ಪಡೆದಿದ್ದ ಹೊಸ ಗೋದಾಮನ್ನು ತೋರಿಸಬೇಕೆಂದು ಹೇಳಿ ಕರೆದೊಯ್ದು ಕತ್ತು ಹಿಸುಕಿ ಕೊಂದು ಸುಟ್ಟು ಭಸ್ಮ ಮಾಡಿದ್ದಾನೆ.


