ಮಹಾರಾಷ್ಟ್ರದ ಮುಂಬ್ರಾದಲ್ಲಿ ಚಲಿಸುತ್ತಿದ್ದ ರೈಲಿನಿಂದ 10ಕ್ಕೂ ಅಧಿಕ ಪ್ರಯಾಣಿಕರು ಕೆಳಗೆ ಬಿದ್ದಿದ್ದು, ಐದಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಥಾಣೆ ಜಿಲ್ಲೆಯ ಮುಂಬ್ರಾ ಮತ್ತು ದಿವಾ ನಿಲ್ದಾಣಗಳ ನಡುವೆ ಈ ದುರಂತ ನಡೆದಿದೆ. ರೈಲಿನಲ್ಲಿ ಅತಿಯಾದ ಜನಸಂದಣಿಯಿಂದಾಗಿ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಬಾಗಿಲುಗಳಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿದ್ದರು.
ಸೋಮವಾರ ಬೆಳಗ್ಗೆ 10 ಗಂಟೆಗೆ ಮುಂಬ್ರಾ ನಿಲ್ದಾಣದ ಮೂಲಕ ರೈಲು ಹಾದುಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಜನಸಂದಣಿ ಮತ್ತು ಪ್ರಯಾಣಿಕರು ಬಾಗಿಲುಗಳ ಮೇಲೆ ನೇತಾಡುತ್ತಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಥಾಣೆ ಸಿವಿಲ್ ಆಸ್ಪತ್ರೆ ಮತ್ತು ಕಲ್ಯಾಣ್‌ನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು, ಕೆಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ರೈಲ್ವೆ ಆಡಳಿತವು ಅಪಘಾತದ ತನಿಖೆಯನ್ನು ಕೈಗೊಂಡಿದೆ. ಈ ಘಟನೆಯಿಂದಾಗಿ ಮುಂಬ್ರಾ-ದಿವಾ ವಿಭಾಗದ ಕಾರ್ಯಾಚರಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ.