Menu

ಮೊದಲು ಲೆಬನಾನ್‌ನಲ್ಲಿ ಕದನ ವಿರಾಮ ಘೋಷಿಸಿ, ಮತ್ತೆ ಶಾಂತಿ ಮಾತುಕತೆ: ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್‌

ಇರಾನ್‌- ಅಮೆರಿಕ ಕದನ ವಿರಾಮದ ಮಧ್ಯೆಯೇ ಇಸ್ರೇಲ್‌ ಲೆಬನಾನ್‌ ಮೇಲೆ ತೀವ್ರ ದಾಳಿಗಳನ್ನು ನಡೆಸಿ 300 ಕ್ಕೂ ಹೆಚ್ಚು ಜನ ಮೃತಪಟ್ಟಿರುವುರಿಂದ ಕೆರಳಿರುವ ಇರಾನ್‌, ಲೆಬನಾನ್‌ನಲ್ಲಿ ಕದನ ವಿರಾಮ ಆಗುವವರೆಗೆ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಧಿಕೃತವಾಗಿ ಪಾಕಿಸ್ತಾನಕ್ಕೆ ತಿಳಿಸಿದೆ.

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅ

ಲೆಬನಾನ್‌ನಲ್ಲಿ ಬಾಂಬ್ ದಾಳಿ ಮುಂದುವರಿದರೆ ಶಾಂತಿ ಒಪ್ಪಂದ ನಡೆಸಲು ಯಾವುದೇ ಯೋಜನೆ ಹೊಂದಿಲ್ಲ ಎಂದು ಇರಾನ್‌ ಹೇಳಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಯಾವುದೇ ಮಾತುಕತೆ ಅಮರಿಕವು ಎಲ್ಲಾ ರಂಗಗಳಲ್ಲಿ ಕದನ ವಿರಾಮ ಬದ್ಧತೆಗಳನ್ನು ಗೌರವಿಸುವುದನ್ನು ಅವಲಂಬಿಸಿರುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಹೇಳಿದ್ದಾರೆ.

ತನ್ನಗ್ರ ಮಿತ್ರ ರಾಷ್ಟ್ರದ ಮೇಲಿನ ದಾಳಿಗಳು ನಿಲ್ಲದಿದ್ದರೆ ಬಲವಾದ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್‌ನೊಂದಿಗೆ ನೇರ ಮಾತುಕತೆಗೆ ಅನುಮೋದನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಲೆಬನಾನ್ ಸರ್ಕಾರ ಪ್ರತಿಕ್ರಿಯಿಸಿಲ್ಲ. ಲೆಬನಾನ್‌ನಲ್ಲಿ ಯಾವುದೇ ಕದನ ವಿರಾಮವಿಲ್ಲ ಮತ್ತು ಇಸ್ರೇಲ್ ಹೆಜ್ಬೊಲ್ಲಾವನ್ನು ಹೊಡೆಯುತ್ತಲೇ ಇರುತ್ತದೆ ಎಂದು ನೆತನ್ಯಾಹು ಈ ಹಿಂದೆಯೇ ಘೋಷಣೆ ಮಾಡಿದ್ದರು.

ಮುಂದಿನ ವಾರ ವಾಷಿಂಗ್ಟನ್‌ನಲ್ಲಿ ಇಸ್ರೇಲ್-ಲೆಬನಾನ್ ಮಾತುಕತೆಗಳು ನಡೆಯುವ ನಿರೀಕ್ಷೆಯಿದೆ. ಕದನ ವಿರಾಮ ಮಾತುಕತೆಗಳ ಭವಿಷ್ಯದ ಬಗ್ಗೆ ಅನಿಶ್ಚಿತತೆಯ ನಡುವೆಯೇ ಸಂಭಾವ್ಯ ಸನ್ನಿವೇಶಕ್ಕೆ ಸಿದ್ಧವಾಗಿದ್ದೇವೆ ಎಂದು ಇರಾನ್ ಹೇಳಿದೆ.

Related Posts

Leave a Reply

Your email address will not be published. Required fields are marked *