ಸಿಲಿಂಡರ್ ಸ್ಫೋಟದಿಂದ ಪಟಾಕಿಗೆ ತಗುಲಿದ ಬೆಂಕಿಯಿಂದ ಮೂರು ಮಕ್ಕಳು ಸೇರಿ 7 ಮಂದಿ ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ಸೋಮವಾರ ಸಂಭವಿಸಿದೆ.
ದಕ್ಷಿಣ ಬಂಗಾಳದ 24 ಪರಗಾನ್ಸ್ ನಲ್ಲಿ ಧೋಲಾಹಟ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಸ್ಫೋಟದಿಂದ ಇಡೀ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, 7 ಮಂದಿ ಮೃತಪಟ್ಟಿದ್ದು, 4 ಮಂದಿ ನಾಪತ್ತೆಯಾಗಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಮೂಲಗಳ ಪ್ರಕಾರ ಮನೆಯಲ್ಲಿ ಅಕ್ರಮವಾಗಿ ಪಟಾಕಿ ಸಿದ್ಧಪಡಿಸಲಾಗುತ್ತಿದ್ದು ಎಂದು ಹೇಳಲಾಗಿದೆ.
ಕಟ್ಟಡದಲ್ಲಿ ಬಾನಿಕ್ ಕುಟುಂಬ ವಾಸವಾಗಿದ್ದು, ಈ ಕುಟುಂಬ ಹಲವು ವರ್ಷಗಳಿಂದ ಪಟಾಕಿ ತಯಾರಿಸುವ ಕಾಯಕದಲ್ಲಿ ತೊಡಗಿಕೊಂಡಿತ್ತು. ಕುಟುಂಬದಲ್ಲಿ 11 ಮಂದಿ ಇದ್ದು, ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ.