ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಶಾಲೆಗಳಿಗೆ ಸರಬರಾಜು ಮಾಡಲು ಇಡಲಾಗಿದ್ದ ಪುಸ್ತಕ ದಾಸ್ತಾನಿಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ.
ಲಕ್ಷಾಂತರ ರೂ. ಮೌಲ್ಯದ ಪುಸ್ತಕಗಳು ಹಾಗೂ ಹಳೆಯ ಶಾಲಾ ಸಮವಸ್ತ್ರಗಳು ಬೆಂಕಿಗಾಹುತಿಯಾಗಿವೆ.
4ನೇ ತರಗತಿಯಿಂದ 8ನೇ ತರಗತಿ ಕನ್ನಡ ಮಾಧ್ಯಮದ ಪುಸ್ತಕಗಳು ಇಲ್ಲಿ ದಾಸ್ತಾನು ಮಾಡಲಾಗಿದ್ದು, ಎಲ್ಲವೂ ಭಸ್ಮವಾಗಿ ಹೋಗಿದೆ.
ಕಿಡಿಗೇಡಿಗಳು ಸಿಗರೇಟು, ಬೀಡಿ ಸೇದಿದ ಬಳಿಕ ಕೊಣೆಯೊಳಗೆ ಎಸೆದು ಹೋಗಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ.
ಅಗ್ನಿಶಾಮಕ ದಳವು ಬೆಂಕಿ ನಂದಿಸುವ ಕೆಲಸ ಮಾಡಿದೆ. ಸುಮಾರು 2 ಲಕ್ಷ ಕ್ಕೂ ಅಧಿಕ ಮೌಲ್ಯದ ಪುಸ್ತಕಗಳು ಸುಟ್ಟು ಕರಕಲಾಗಿವೆ. ಪೊಲೀಸ್ ಮತ್ತು ಸಂಬಂಧಿಸಿದ ಇಲಾಖೆಯ ತನಇಖೆ ಬಳಿಕ ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ.