ಎರಡು ದಿನಗಳ ಹಿಂದೆ ಬೆಂಕಿ ಅವಘಡ ಸಂಭವಿಸಿ ಐವರು ಮೃತಪಟ್ಟಿದ್ದ ಬೆಂಗಳೂರಿನ ನಗರ್ತಪೇಟೆಯ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಮಟ್ಟಿನ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮೂರು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಲಾಗಿದೆ.
ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಅಗ್ನಿ ಶಾಮಕ ದಳ ಸ್ಥಳದಲ್ಲೇ ಬೀಡು ಬಿಟ್ಟಿದೆ.ರಾಮಣ್ಣ ಲೇನ್ ನಲ್ಲಿರುವ ಈ ಕಟ್ಟಡದಲ್ಲಿ ಗೋಡೌನ್ ಇದೆ. ಬೆಂಕ ದುರಂತ ಸಂಭವಿಸಿದ ಬಳಿಕ ಸುತ್ತಮುತ್ತಲಿನ ಅಂಗಡಿಗಳವರು ಖಾಲಿ ಮಾಡಿಕೊಂಡು ಹೋಗಿದ್ದಾರೆ.
ಎರಡು ದಿನದ ಹಿಂದೆ ಕಟ್ಟದಡ ಮೂರನೇ ಅಂತಸ್ತಿನಲ್ಲಿ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ನಾಲ್ವರು ಮತ್ತು ಪಕ್ಕದ ಮನೆಯ ನಿವಾಸಿ ಪ್ರಾಣ ಕಳೆದುಕೊಂಡಿದ್ದರು. . ಈ ಸಂಬಂಧ ಕಟ್ಟಡದ ಮಾಲೀಕ ಮತ್ತು ಅವರ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಈ ದುರಂತದ ಬಳಿಕ ವಾಸಯೋಗ್ಯ ಪ್ರಮಾಣಪತ್ರ ಹೊಂದಿಲ್ಲದ ಕಟ್ಟಡಗಳ ವಿರುದ್ಧ ಕರಮ ಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿಗೆ ಸೂಚನೆ ನೀಡಿದ್ದಾರೆ.