ಲೈಂಗಿಕ ದೌರ್ಜನ್ಯ ಆರೋಪದಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ವೇಗಿ ಯಶ್ ದಯಾಳ್ ವಿರುದ್ಧ ಗಾಜಿಯಾಬಾದ್ ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಯಶ್ ದಯಾಳ್ ಜೊತೆ 5 ವರ್ಷಗಳಿಂದ ಸಂಬಂಧ ಹೊಂದಿದ್ದು, ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ನಂತರ ವಂಚಿಸಿದ್ದಾರೆ ಎಂದು ಮಹಿಳೆ ನೀಡಿದ ದೂರು ಆಧರಿಸಿ ಎಫ್ ಐಆರ್ ದಾಖಲಾಗಿದೆ.
ಇತ್ತೀಚೆಗೆ ಮಹಿಳೆ ಸಂದರ್ಶನವೊಂದರಲ್ಲಿ ಯಶ್ ದಯಾಳ್ ವಿರುದ್ಧ ಆರೋಪ ಮಾಡಿದ್ದು, ತಮ್ಮ ಖ್ಯಾತಿ ಹಾಗೂ ಹಣದ ಪ್ರಭಾವದಿಂದ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಒಂದು ವೇಳೆ ಮಹಿಳೆ ನೀಡಿದ ದೂರಿನಲ್ಲಿ ತಪ್ಪಿತಸ್ಥ ಎಂದು ಕಂಡು ಬಂದರೆ ಯಶ್ ದಯಾಳ್ ಗೆ ನೂತನ ನ್ಯಾಯ ಸಂಹಿತೆ ಪ್ರಕಾರ ಕನಿಷ್ಠ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ಪ್ರಕರಣದ ಬಗ್ಗೆ ಯಶ್ ದಯಾಳ್ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಪ್ರತಿಕ್ರಿಯೆ ನೀಡಿಲ್ಲ.