ಬೆಂಗಳೂರಿನಲ್ಲಿ ಇತ್ತೀಚೆಗೆ ಫೈನಾನ್ಸಿಯರ್ ಮನೋಜ್ ಎಂಬಾತನ ಕಿಡ್ನ್ಯಾಪ್ ಮಾಡಿದ್ದ ಕೇಸ್ ಸಂಬಂಧ ಸಿಸಬಿ ಪೊಲೀಸರು ರೌಡಿಶೀಟರ್ ಬೇಕರಿ ರಘುವನ್ನು ಬಂಧಿಸಿದ್ದಾರೆ.
ಸಂಘಟಿತ ಅಪರಾಧ ತಡೆಯುವ ನಿಟ್ಟಿನಲ್ಲಿ ಕೋಕಾ ಕಾಯಿದೆಯಡಿ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಒಂದು ವರ್ಷ ಜಾಮೀನು ಸಿಗುವುದು ಅನುಮಾನ.
ಕೆಲವು ತಿಂಗಳ ಹಿಂದೆ ಮಹಾಲಕ್ಷ್ಮಿ ಲೇಔಟ್‌ಗೆ ಫೈನಾನ್ಸಿಯರ್ ಮನೋಜ್‌ನನ್ನು ಕರೆಸಿ ರಾಜೇಶ್ ಅಲಿಯಾಸ್ ಅಪ್ಪಿ ಟೀಂನಿಂದ ಕಿಡ್ನ್ಯಾಪ್ ಮಾಡಿಸಲಾಗಿತ್ತು. ಮನೋಜ್ ಬಳಿ ರಾಜೇಶ್ ಹಣ ಕೇಳಿದ್ದ, ಆದರೆ ಕೊಡೋದಕ್ಕೆ ಮನೋಜ್ ಹಿಂದೇಟು ಹಾಕಿದ್ದ. ಈ ದ್ವೇಷಕ್ಕೆ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಿನಗೆ ಬರಬೇಕಾಗಿರುವ ಸಾಲ ವನ್ನು ರಿಕವರಿ ಮಾಡಿ ಕೊಡಿಸುವೆ, ಮಾತನಾಡೋಣ ಎಂದು ರಾಜೇಶ್ ಮನೋಜ್‌ನನ್ನು ಕರೆಸಿ ಕಿಡ್ನ್ಯಾಪ್ ಮಾಡಿ ದಾಬಸ್‌ಪೇಟೆಗೆ ಕರೆದೊಯ್ಯಲಾಗಿತ್ತು.
ದಾಬಸ್ ಪೇಟೆಯ ತೋಟದ ಮನೆಯಲ್ಲಿರಿಸಿ 50 ಲಕ್ಷ ಹಣ ಕೊಡುವಂತೆ ಹಲ್ಲೆ ಮಾಡಲಾಗಿತ್ತು. ಹಣ ಬೇಗನೆ ಅರೇಂಜ್ ಮಾಡು ಎಂದು ಮನೋಜ್‌ಗೆ ಹೇಳಿ ಹೇಳಿ ಬಿಟ್ಟು ಕಳಿಸಲಾಗಿತ್ತು. ಬಳಿಕ ಮನೋಜ್ ಸಿಸಿಗೆ ದೂರು ನೀಡಿದ್ದ. ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಏಳು ಜನರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಬೇಕರಿ ರಘು ಹೆಸರು ಹೇಳಿದ್ದರು. ಮಂಡ್ಯ ಬಳಿ ಸಿಸಿಬಿ ಎಸಿಪಿ ಗೋವಿಂದರಾಜು ನೇತೃತ್ವದಲ್ಲಿ ಅರೆಸ್ಟ್ ಮಾಡಿದ್ದಾರೆ.


