Thursday, February 12, 2026
Menu

ಹಣಕಾಸು ಕಲಹ: ತಂದೆ, ತಾಯಿಯ ಕೊಲೆಗೈದ ಟೆಕ್ಕಿ ರೋಹನ್‌ ಭಟ್‌

ಹಣಕಾಸು ವಿಚಾರದಲ್ಲಿ ನಡೆದ ಜಗಳ ತೀವ್ರಗೊಂಡು ಯುವಕನೊಬ್ಬ ತಂದೆ, ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ನೌಕಾಪಡೆಯ ಆರ್ಮಿ ಕ್ಯಾಪ್ಟನ್‌ ಆಗಿದ್ದ ತಂದೆ ನವೀನ್ ಚಂದ್ರ ಭಟ್, ದಂತ ವೈದ್ಯೆಯಾಗಿದ್ದ ತಾಯಿ ಶಾಮಲಾ ಭಟ್ ಕೊಲೆಯಾದವರು. ದಂಪತಿಯ ಮಗ ರೋಹನ್ ಭಟ್ ಕೊಲೆ ಆರೋಪಿ. ಈತ ಟೆಕ್ಕಿಯಾಗಿದ್ದಾನೆ.

ಮೃತ ದಂಪತಿಯ ಪುತ್ರಿ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.

ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರೋಹನ್‌ ಭಟ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಕ್ಕೂ ತಂದೆ ತಾಯಿಯನ್ನು ಕೊಲೆ ಮಾಡುವ ವರೆಗಿನ ಕೌಟುಂಬಿಕ, ಹಣಕಾಸು ಕಲಹ ಏನು ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *