ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಘವೇಂದ್ರ ಲೇಔಟ್ ನಲ್ಲಿ ಸ್ನೇಹಿತರ ನಡುವೆ ಹಣಕಾಸು ವಿಚಾರಕ್ಕೆ ಉಂಟಾಗಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ.
ಉತ್ತರಪ್ರದೇಶ ಮೂಲದ ದೇವೇಂದ್ರ ಸಿಂಗ್ ಮೃತಪಟ್ಟವರು, ಉತ್ತರಪ್ರದೇಶದ ಮೇವಾ ಕೊಲೆ ಆರೋಪಿ. ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಪೇಂಟಿಂಗ್ ಕೆಲಸ ಮಾಡುತ್ತಿದ್ದ ದೇವೇಂದ್ರ ಸಿಂಗ್ ಬೇಗೂರು ರಾಘವೇಂದ್ರ ಲೇಔಟ್ ನಲ್ಲಿ ವಾಸವಾಗಿದ್ದ. ಮೂರು ದಿನಗಳ ಹಿಂದೆ ದೇವೇಂದ್ರ ಸಿಂಗ್ ರೂಮ್ ಗೆ ಬಂದಿದ್ದ ಆರೋಪಿ ಮೇವಾ ಹಣಕಾಸು ವಿಚಾರಕ್ಕೆ ಜಗಳವಾಡಿದ್ದಾರೆ. ದಈ ವೇಳೆ ಮೇವಾ ತಲೆಗೆ ದೇವೆಂಧ್ರಸಿಂಗ್
ದೊಣ್ಣೆಯಿಂದ ಹೊಡೆದಿದ್ದಾನೆ, ಗಾಯಗೊಂಡ ಆತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಆರೋಪಿ ಮೇವಾ ಅಲ್ಲಿಂದ ಪರಾರಿಯಾಗಿದ್ದ, ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.