ಬೆಂಗಳೂರಿನಲ್ಲಿ ಲೇಓವರ್ ಸಮಯದಲ್ಲಿ ಪೈಲಟ್ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳಾ ಸಹ-ಪೈಲಟ್ ಆರೋಪಿಸಿದ್ದಾರೆ.
ಚಾರ್ಟರ್ಡ್ ವಿಮಾನದ ಕರ್ತವ್ಯ ವೇಳೆ ಲೇಓವರ್‌ನಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಮೊದಲು ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಬೆಂಗಳೂ ರಿಗೆ ವರ್ಗಾಯಿಸಲಾಗಿದೆ. ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನವೆಂಬರ್ 18ರಂದು ರಾತ್ರಿ ಪೈಲಟ್ ರೋಹಿತ್ ಶರಣ್ ಮಹಿಳಾ ಸಹ-ಪೈಲಟ್ ಅವರನ್ನು ಸಿಗರೇಟ್ ಸೇದಲು ಕಂಪನಿ ಕೊಡಲು ಬರುವಂತೆ ಕೇಳಿಕೊಂಡ. ಆಕೆ ಅದಕ್ಕೆ ಒಪ್ಪಿ ಹೋದರು. ಹೊರಗೆ ಸಿಗರೇಟ್ ಸೇದಿದ ನಂತರ ಅವರು ತಮ್ಮ ಹೋಟೆಲ್ ರೂಂ ಕಡೆ ನಡೆದರು. ರೋಹಿತ್ ಶರಣ್ ತನ್ನ ರೂಂ ಬಳಿ ತಲುಪಿದಾಗ ಆಕೆಯನ್ನು ಒಳಗೆ ಎಳೆದುಕೊಂಡು ಅತ್ಯಾಚಾರ ಎಸಗಿ ದ್ದಾನೆ ಎಂದು ಆರೋಪಿಸಲಾಗಿದೆ.
ನವೆಂಬರ್ 20ರಂದು ಮಹಿಳೆ ಹೈದರಾಬಾದ್‌ಗೆ ಹಿಂತಿರುಗಿದ್ದರು. ನಡೆದ ಘಟನೆಯನ್ನು ವಿಮಾನ ನಿರ್ವಹಣೆಗೆ ವರದಿ ಮಾಡಿ ನಂತರ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಲಾಗಿದೆ. ತನಿಖೆ ಮುಗಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದು ಪೊಲೀಸರು ತಿಳಿಸಿದ್ದಾರೆ.


