ಮಹಿಳಾ ಬಾಡಿ ಬಿಲ್ಡರ್ ಖ್ಯತ ಚಿತ್ರಾಪುರುಷೋತ್ತಮ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬೆನ್ನಲ್ಲೇ ಅವರ ಸಾಂಪ್ರದಾಯಿಕ ಸೀರೆಯಲ್ಲೂ ಬಾಡಿಬಿಲ್ಡ್ ಫೋಟೊ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದೆ.
ಕನ್ನಡದ ಖ್ಯಾತ ಮಹಿಳಾ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ವಿಶಿಷ್ಟ ವಧುವಿನ ಲುಕ್ನಿಂದಾಗಿ ಗಮನ ಸೆಳೆದಿದ್ದಾರೆ. ಮದುವೆಯಲ್ಲಿ ಕಾಂಚಿವರಂ ಸೀರೆ ಧರಿಸಿಯೂ ಬೈಸೆಪ್ಸ್ [ಬಾಡಿ ಶೋ] ಪ್ರದರ್ಶನ ನೀಡಿರುವ ಫೋಟೊಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಫೋಟೊಗಳು ವೈರಲ್ ಆಗಿವೆ.
ಶಕ್ತಿ ಮತ್ತು ಸಾಂಪ್ರದಾಯಿಕ ಉಡುಪಿನ ಈ ಮಿಶ್ರಣವು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಮತ್ತು ಹಾಸ್ಯದ ಮಿಶ್ರಣವನ್ನು ಹುಟ್ಟುಹಾಕಿದೆ. ಇನ್ನು ಯಾವಾಗಲೂ ತನ್ನ ಬಾಡಿ ಬಿಲ್ಡಿಂಗ್ ಮೂಲಕ ದೇದಾರ್ಢ್ಯತೆ ತೋರಿಸುತ್ತಿದ್ದ ಚಿತ್ರಾ ಇದೀಗ ಸುಂದರ ಹುಡುಗಿಯಂತೆ ಸಿಂಗರಿಸಿಕೊಂಡು ಮದುವೆ ಮಾಡಿಕೊಳ್ಳಲು ಬಂದಿದ್ದಕ್ಕೆ ಅನೇಕರು ಅವರನ್ನು ಹೊಗಳಿದ್ದಾರೆ.
ಚಿತ್ರಾ ಮಿಸ್ ಇಂಡಿಯಾ ಫಿಟ್ನೆಸ್ ಮತ್ತು ವೆಲ್ನೆಸ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇನ್ನು ಚಿತ್ರಾ ಹಂಚಿಕೊಂಡಿರುವ ಈ ಫೋಟೋ ಸೌಂದರ್ಯ ಎನ್ನುವುದು ಜಿಮ್ ಹಾಗೂ ವ್ಯಾಯಾಮ ಕ್ಷೇತ್ರಗಳಿಗೂ ವಿಸ್ತರಣೆಗೊಳ್ಳುತ್ತಿದೆ ಎಂದು ಚರ್ಚೆಯನ್ನು ಮಾಡುತ್ತಿದ್ದಾರೆ.
ಭಾರತೀಯ ಸಂಪ್ರದಾಯ ಮತ್ತು ಶಕ್ತಿಯ ಗಮನಾರ್ಹ ಮಿಶ್ರಣದಲ್ಲಿ ಕರ್ನಾಟಕ ಮೂಲದ ಬಾಡಿ ಬಿಲ್ಡರ್ ಚಿತ್ರಾ ಪುರುಷೋತ್ತಮ್ ತಮ್ಮ ಅಸಾಂಪ್ರದಾಯಿಕ ವಧುವಿನ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು ದೇಶದಾದ್ಯಂತ ಭಾರೀ ವೈರಲ್ ಆಗುತ್ತಿವೆ.
ಕ್ಲಾಸಿಕ್ ಕಾಂಜೀವರಂ ಸೀರೆಯಲ್ಲಿ ಮತ್ತು ಸಾಂಪ್ರದಾಯಿಕ ಆಭರಣಗಳಿಂದ ಅಲಂಕರಿಸಲ್ಪಟ್ಟ ಚಿತ್ರಾ, ಸಾಂಪ್ರದಾಯಿಕ ವಧುವಿನ ಸೌಂದರ್ಯಶಾಸ್ತ್ರಕ್ಕೆ ಸವಾಲು ಹಾಕುತ್ತಾ ಆತ್ಮವಿಶ್ವಾಸದಿಂದ ತನ್ನ ಬೈಸೆಪ್ಸ್ ಅನ್ನು ತೋರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿರುವ ಇವರ ಫೋಟೋಗಳು ಹಾಗೂ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
ಹಲವಾರು ಕಾಮೆಂಟ್ಗಳು ಕೂಡ ಬಂದಿವ. ಫಿಟ್ನೆಸ್ಗಾಗಿ ಅವರ ಸಮರ್ಪಣೆ ಮತ್ತು ಸಾಂಪ್ರದಾಯಿಕ ರೂಢಿಗಳಿಂದ ಹೊರಬಂದು ಜಿಮ್ ಮಾಡಿ 6-ಪ್ಯಾಕ್ ಮಾಡಿಕೊಂಟಡಿರುವ ಚಿತ್ರಾ ಅವರಿಗೆ ನೆಟಿಜನ್ಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೆಲವರು ಚಿತ್ರಾ ಅವರನ್ನು ನೋಡಿ ಹುಡುಗನಂತೆ ಇದ್ದಾರೆ ಎಂದು ನಗಾಡಿದ್ದಾರೆ.
ಒಬ್ಬ ಬಳಕೆದಾರರು, ಅವಳ ಅತ್ತೆ, ಮಾವಂದಿರು ಅವಳೊಂದಿಗೆ ಜಗಳ ಮಾಡುವ ಮೊದಲು ಯಾವಾಗಲೂ ಎರಡು ಬಾರಿ ಯೋಚಿಸುತ್ತಾರೆ! ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚಿನ್ನದ ಆಭರಣಗಳ ಜೊತೆಗೆ, ಅವಳು ತನ್ನ ದೇಹದಾರ್ಡ್ಯ ಪದಕಗಳನ್ನು ಸಹ ಧರಿಸಬೇಕು ಎಂದು ಹೇಳಿದ್ದಾರೆ.