ಉಗ್ರ ನಾಸಿರ್ ಗೆ ಸಹಾಯ ಮಾಡುತ್ತಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಎನ್‌ಐಎ ಮಹತ್ವದ ವಿಚಾರಗಳನ್ನು ಬಯಲಿಗೆಳೆದಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಫಾತಿಮಾ ತನ್ನ ಮಗ ಉಗ್ರ ಜುನೈದ್ ಜೊತೆ ರಾತ್ರಿ ಎರಡು ಗಂಟೆಗೆ ಸಿಡಿಆರ್ ನಲ್ಲಿ ಸಂಪರ್ಕ ಸಾಧಿಸಿ ನಲ್ವತ್ತು ನಿಮಿಷ ಮಾತುಕತೆ ನಡೆಸಿರುವುದ ಬೆಳಕಿಗೆ ಬಂದಿದೆ.
ಎಎಸ್‌ಐ ಚಾಂದ್ ಪಾಷಾ, ವೈದ್ಯ ನಾಗರಾಜ, ಫಾತೀಮಾರ ವಿಚಾರಣೆ ಚುರುಕುಗೊಳಿಸಿರುವ ತನಿಖಾ ತಂಡವು ಜುನೈದ್ ಮಾತನ್ನು ಫಾತಿಮಾ ಚಾಂದ್ ಪಾಷಾಗೆ ಹೇಳಿದ್ದು, ಆತ ವೈದ್ಯ ನಾಗರಾಜ ಮೂಲಕ ಅದನ್ನು ಉಗ್ರ ನಾಸಿರ್‌ಗೆ ತಲುಪಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.
ಫಾತಿಮಾ ಮನೆ ಮೇಲೆ ದಾಳಿ ಮಾಡಿದ್ದಾಗ ಮೂರ್ನಾಲ್ಕು ಮೊಬೈಲ್ ಪತ್ತೆಯಾಗಿದ್ದು, ಎಲ್ಲಾ ಮೊಬೈಲ್ ಸಿಡಿಆರ್ ಪಡೆದು ವಿಚಾರಣೆ ತನಿಖಾ ತಂಡ ವಿಚಾರಣೆ ಮುಂದುವರಿಸಿದೆ.