ಆ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ವ್ಯಕ್ತಿಯ ಮಗಳು ಬದುಕಿದ್ದಳು, ಆದರೆ ಜೀವಂತ ಶವವಾಗಿದ್ದಳು.ಉಸಿರಾಡುವ ಅಸ್ತಿಪಂಜರದಂತಿದ್ದಳು. ಆಕೆಯ ದೇಹದಲ್ಲಿ ಮಾಂಸವಿತ್ತು ಎಂಬುದಕ್ಕೆ ಯಾವುದೇ ಗುರುತೂ ಇಲ್ಲವಾಗಿತ್ತು. ಇದು ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿರುವ ಬೆಚ್ಚಿ ಬೀಳಿಸುವ ಹೃದಯವಿದ್ರಾವಕ ಘಟನೆ ಇದು.
ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿಯೊಬ್ಬರು ಇತ್ತಿಚೆಗೆ ಶವವಾಗಿ ಪತ್ತೆಯಾಗಿದ್ದು, ಪರಿಶೀಲನೆಗೆ ಅಧಿಕಾರಿಗಳು ತೆರಳಿದರೆ ಆಘಾತಕಾರಿ ದೃಶ್ಯ ಕಂಡು ಬಂದಿದೆ. ಆ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ವ್ಯಕ್ತಿಯ ಬುದ್ಧಿಮಾಂದ್ಯ ಮಗಳು ಬದುಕಿದ್ದಳು, ಆದರೆ ಜೀವಂತ ಶವವಾಗಿದ್ದಳು. ಆಕೆಯ ದೇಹದಲ್ಲಿ ಮಾಂಸವಿತ್ತು ಎಂಬುದಕ್ಕೆ ಯಾವುದೇ ಗುರುತೂ ಇಲ್ಲವಾಗಿತ್ತು. ಉಸಿರಾಡುವ ಅಸ್ತಿಪಂಜರದಂತಿದ್ದಳು.
ಪರಿಸ್ಥಿತಿ ನೋಡಿದ ಅಧಿಕಾರಿಗಳು ಮನೆ ಕೆಲಸದಾಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆಯ ಕ್ರೌರ್ಯ ಅನಾವರಣಗೊಂಡಿದೆ. ಓಂ ಪ್ರಕಾಶ್ ಸಿಂಗ್ ರಾಥೋರ್ ಭಾರತೀಯ ರೈಲ್ವೆಯ ಮಾಜಿ ಉದ್ಯೋಗಿ, ನಿವೃತ್ತಿ ಜೀವನ ನಡೆಸುತ್ತಿದ್ದ ಅವರ ಪತ್ನಿ 2016ರಲ್ಲಿ ಮೃತಪಟ್ಟ ಬಳಿಕ ಮಗಳು ರಶ್ಮಿ ಜೊತೆ ಜೀವನ ಮಾಡುತ್ತಿದ್ದರು. ಆದರೆ ಓಂ ಪ್ರಕಾಶ್ ಶವವಾಗಿದ್ದರೆ, ಮಗಳು ರಶ್ನಿ ಊಟ ನೀರು ಸಿಗದೆ ಜೀವಂತ ಶವದಂತಿದ್ದಾರೆ.
ಪೊಲೀಸರ ಪ್ರಕಾರ ಅವರ ದೇಹದಲ್ಲಿ ಆಸ್ತಿಪಂಜರ ಬಿಟ್ಟರೆ ಒಂದು ಕೆಜಿ ಮಾಂಸವೂ ಇಲ್ಲ, ಬಟ್ಟೆಯೂ ಇಲ್ಲದ ಸ್ಥಿತಿಯಲ್ಲಿದ್ದಾರೆ. ಓಂಪ್ರಕಾಶ್ ಅವರ ಪತ್ನಿಯ ಸಾವಿನ ನಂತರ ಮನೆಕೆಲಸದಾಕೆ ಮತ್ತು ಆಕೆಯ ಗಂಡ ಸಂಪೂರ್ಣವಾಗಿ ಮನೆಯನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ತಂದೆ- ಮಗಳಿಗೆ ಹಲವು ವರ್ಷಗಳಿಂದ ಹೊರಗಿನ ಪ್ರಪಂಚದ ಸಂಪರ್ಕ ಸಿಗದಂತೆ ಮಾಡಿದ್ದಾಳೆ. ಅವರ ಸಂಬಂಧಿಕರು ಮನೆ ಬಳಿ ಬಂದರೆ ಓಂ ಪೆಕಾಶ್ ಅವರು ಯಾರನ್ನೂ ನೋಡಲು ಇಷ್ಟಪಡುತ್ತಿಲ್ಲವೆಂದು ಹೇಳಿ ಮನೆ ಕೆಲದಾಕೆ ವಾಪಸ್ ಕಳಿಸುತ್ತಿದ್ದಳು. ಮನೆಯ ನೆಲಮಹಡಿಗೆ ಅವರನ್ನು ಸ್ಥಳಾಂತರಿಸಿದ್ದಾರೆ. ಮನೆ ಕೆಲಸದಾಕೆ ಮತ್ತು ಗಂಡ ಆ ಮನೆ ಆಸ್ತಿಗೆ ತಾವೇ ಮಾಲೀಕರೆಂದು ಘೋಷಿಸಿ ನಾಮಫಲಕವನ್ನೂ ಹಾಕಿಸಿಕೊಂಡಿದ್ದಾರೆ.
ಡಿಸೆಂಬರ್ 29ರಂದು ಓಂ ಪ್ರಕಾಶ್ ಸಿಂಗ್ ರಾಥೋರ್ ಮೃತಪಟ್ಟ ಬಳಿಕವೇ ಅವರ ಈ ದುಸ್ಥಿತಿ ಹೊರ ಪ್ರಪಂಚಕ್ಕೆ ಗೊತ್ತಾಗಿದೆ. ಈ ಅಪ್ಪ ಮಗಳ ಮೇಲೆ 5 ವರ್ಷಗಳಿಂದ ಮನೆಯೊಳಗೆ ಕೆಲಸದಾಕೆಯಿಂದ ದೌರ್ಜನ್ಯ ನಡೆಯುತ್ತಿತ್ತು. ವಿಷಯ ತಿಳಿದ ಬಳಿಕ ಪೊಲೀಸರು ಮನೆಯ ಕೆಲಸದವರು ಹಾಗೂ ಕೇರ್ ಟೇಕರ್‌ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.


