Thursday, October 16, 2025
Menu

ಪತಿಯಿಂದ ಕೊಲೆಯಾದ ವೈದ್ಯೆ ಕೃತಿಕಾ ಮನೆಯನ್ನು ಇಸ್ಕಾನ್‌ಗೆ ನೀಡಿದ ತಂದೆ

ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ವೈದ್ಯೆ ಕೃತಿಕಾ‌ರೆಡ್ಡಿಯನ್ನು ವೈದ್ಯ ಪತಿ ಮಹೇಂದ್ರ ರೆಡ್ಡಿ ಹತ್ಯೆ ಮಾಡಿರುವುದು ಬಯಲಅದ ಬಳಿಕ ಆಕೆ ವಾಸವಿದ್ದ ಮನೆಯನ್ನು ತಂದೆ ಮುನಿರೆಡ್ಡಿ ಇಸ್ಕಾನ್‌ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ.

ಆ ಮನೆಯಲ್ಲಿ ಮಗಳ ನೆನಪು ಕಾಡುತ್ತದೆ ಎಂದು ಮುನಿರೆಡ್ಡಿ ಇಸ್ಕಾನ್ ಗೆ ದಾನ ಮಾಡಿದ್ದಾರೆ, ಅವರು ಆ ಮನೆಯನ್ನು ಮಗಳಿಗಾಗಿ ಆಕೆಯ ಇಷ್ಟದಂತೆ ಕಟ್ಟಿಸಿದ್ದರು. ಮದುವೆ ನಂತರ ಮಗಳು ಮತ್ತು ಅಳಿಯ ಇದೇ ಮನೆಯಲ್ಲಿ ವಾಸ ಇರಬೇಕು ಎಂದು ಆಸೆ ಪಟ್ಟಿದ್ದರು.

ಆರೋಪಿ ಮಹೇಂದ್ರನ ಕುಟುಂಬ ವರ್ತೂರು ಬಳಿಯ ಗಂಜೂರಿನಲ್ಲಿ ವಾಸವಿತ್ತು, ಅದು ಹಳೆ ಮನೆ ಆದ್ದರಿಂದ ಮಾರತ್‌ ಹಳ್ಳಿಯ ತನ್ನ ಮನೆಯಲ್ಲಿ ವಾಸ ಮಾಡಲು ಕೃತಿಕಾ ತಂದೆ ಬಯಸಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ವೈದ್ಯೆ ಕೃತಿಕಾಗೆ ಪತಿ ಮಹೇಂದ್ರ ರೆಡ್ಡಿ ಔಷಧ ಇಂಜೆಕ್ಷನ್‌ ನೆಪದಲ್ಲಿ ಮನೆಯಲ್ಲೆ ಅನಸ್ತೇಷಿಯಾ ನೀಡಿದ್ದ, ಇದರಿಂದ ಆಕೆ ಮೃತಪಟ್ಟಿದ್ದಾರೆ.

ಅನೈತಿಕ ಸಂಬಂಧ ಪತ್ನಿಯ ಕೊಲೆಗೆ ಕಾರಣವಾಯ್ತಾ?

 

ಮಹಿಳೆಯೊಬ್ಬಳ ಜೊತೆ ಮಾತನಾಡವುದಕ್ಕೆ ಮಹೇಂದ್ರ ರೆಡ್ಡಿ ಇನ್ನೊಂದು ಮೊಬೈಲ್ ಬಳಸುತ್ತಿದ್ದ ಎಂಬುದು ಪತ್ತೆಯಾಗಿದೆ. ಆತನಲ್ಲಿದ್ದ ಎರಡು ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸರು ಆದರಲ್ಲಿರುವ‌ ಎಲ್ಲಾ ಮಾಹಿತಿಯನ್ನು ಕಲೆ‌ ಹಾಕುತ್ತಿದ್ದಾರೆ.

ಕೊಲೆ ಪ್ಲ್ಯಾನ್ ನಲ್ಲಿ ಆ ಮಹಿಳೆಯ ಕೈವಾಡ ಇದೆಯಾ, ಆಕೆ ಮತ್ತು ಮಹೇಂದ್ರ ಇಬ್ಬರು ಸೇರಿ ಕೊಲೆ ಸ್ಕೆಚ್ ಹಾಕಿದ್ದರಾ ಎಂಬ ಬಗ್ಗೆ ತನಿಖೆಯಾಗುತ್ತಿದೆ. ಮೊಬೈಲ್ ನಲ್ಲಿನ ಡಿಲಿಟ್ ಆಗಿರುವ ಎಲ್ಲಾ ಮಾಹಿತಿ ಹಿಂಪಡೆಯಲು ಎಫ್.ಎಸ್.ಎಲ್‌ಗೆ ಕಳಿಸಲು ಚಿಂತನೆ ನಡೆದಿದೆ. ಒಂದು ವೇಳೆ ಆಕೆಯ ಕೈವಾಡ‌ವಿದ್ದರೇ ಆಕೆಯನ್ನೂ ಪೊಲೀಸರು ಬಂಧಿಸಲಿದ್ದಾರೆ.

Related Posts

Leave a Reply

Your email address will not be published. Required fields are marked *