ಶಿವಮೊಗ್ಗ ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಶ್ರೀನಿಧಿ ವೈನ್ ಶಾಪ್ ಎದುರು ಮಾವನೊಬ್ಬ ಅಳಿಯನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಅರುಣ ಎಂಬಾತ ವೈನ್ ಶಾಪ್ ಮುಂದೆ ನಿಂತಿದ್ದಾಗ ಅಲ್ಲಿಗೆ ಬಂದ ಇಬ್ಬರು ರಾಡ್ನಿಂದ ದಾಳಿ ಮಾಡಿದ್ದಾರೆ, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅರುಣನಿಗೆ ಹೆಣ್ಣು ಕೊಟ್ಟ ಮಾವ ತಿಪ್ಪೇಶ ಮತ್ತು ಹೆಂಡತಿಯ ಸೋದರ ಮಾವ ಲೋಕೇಶ್ ಕೊಲೆ ಮಾಡಿದ್ದಾರೆ.
ಯಶಸ್ವಿನಿ ಎಂಬಾಕೆಯೊಂದಿಗೆ ಅರುನ್ ಮದುವೆಯಾಗಿ ಎರಡು ವರ್ಷವಾಗಿತ್ತು. ಇಬ್ಬರ ನಡುವೆ ಇತ್ತೀಚೆಗೆ ಗಲಾಟೆ ಆಗಿತ್ತು. ಕೆಲವು ತಿಂಗಳನಿಂದ ಯಶಸ್ವಿನಿ ತವರು ಮನೆಯಲ್ಲಿ ಇದ್ದಳು. ಮಗಳಿಗೆ ಅಳಿಯ ಹಿಂಸೆ ಕೊಡುತ್ತಿದ್ದಾನೆ ಎಂದುಕೊಂಡು ಆಕೆಯ ತಂದೆ ಮತ್ತು ಸೋದರ ಮಾವ ಇಬ್ಬರು ಸೇರಿ ಅರುಣನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಅರುಣ್, ಯಶಸ್ವಿನಿ ಪ್ರೀತಿಸಿ ಮದುವೆಯಾಗಿದ್ದು, ಒಂದು ಮಗು ಇದೆ. ಅರುಣ್ ಕೂಲಿ ಕೆಲಸ ಮಾಡಿಕೊಂಡು ಮಾಡಿಕೊಂಡಿದ್ದು, ಗಾಂಜಾ ಸೇವನೆಯ ಚಟ ಇತ್ತು. ಪತ್ನಿಗೆ ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ. ಕುಡಿದು ಬಂದು ಗಲಾಟೆ ಮಾಡುವುದು, ಹೆಂಡತಿಯನ್ನು ಹೊಡೆಯುವುದು ಮಾಡುತ್ತಿದ್ದ ಎಂದು ಹೇಳಲಾಗಿದೆ. ಹೀಗಾಗಿ ಪತ್ನಿ ಮೂರು ತಿಂಗಳಿನಿಂದ ತವರು ಮನೆಯಲ್ಲಿದ್ದಳು. ಅರುಣ್ ‘ನಿಮ್ಮ ಇಡೀ ಕುಟುಂಬವನ್ನೇ ಟಾರ್ಗೆಟ್ ಮಾಡುವೆ’ ಎಂದು ಪತ್ನಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಅಳಿಯ ಮಗಳಿಗೆ ಕೊಡುತ್ತಿದ್ದ ಕಿರುಕುಳಕ್ಕೆ ಟಾರ್ಚರ್ ನೋಡಿ ತಂದೆ ತಿಪ್ಪೇಶ ರೋಸಿ ಮಗಳ ಸೋದರ ಮಾವನನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.


