ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶಾಖಾಪುರ(ಎಸ್.ಕೆ) ಗ್ರಾಮದಲ್ಲಿ ಕೊಟ್ಟ ಸಾಲ ಮರಳಿ ಕೊಡುವಂತೆ ಕೇಳಿದ ಅಳಿಯನನ್ನು ಆತನ ಸೋದರ ಮಾವ ಕೊಲೆ ಮಾಡಿರುವ ಘಟನೆ ನಡೆದಿದೆ.
ಲಕ್ಷ್ಮಣ ಚಿಗರಿಹಾಳ (25) ಹತ್ಯೆಗೀಡಾದ ಯುವಬಕ. ಆತನ ಸೋದರ ಮಾವ ಮಾನಪ್ಪ ಎಂಬಾತ ಕೊಲೆ ಆರೋಪಿ. ಮಂಗಳವಾರ ತಡರಾತ್ರಿ ಲಕ್ಷ್ಮಣ ಬರ್ಹಿದೆಸೆಗೆ ಹೋಗುತ್ತಿದ್ದಾಗ, ಆತನ ಮೇಲೆ ದಾಳಿ ಮಾಡಿ ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಡಿವೈಎಸ್ಪಿ ಜಾವೀದ್ ಇನಾಮದಾರ್, ಪಿಎಸಐ ಅಮೋಜ್ ಕಾಂಬಳೆ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಮಾನಪ್ಪನನ್ನು ಪೊಲೀಸರು ಬಂಧಿಸಿದ್ದು, ಈ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.