Tuesday, February 24, 2026
Menu

ಮಗಳ ಲವ್‌ ಮ್ಯಾರೇಜ್‌ಗೆ ಸಹಕರಿಸಿದ ಯುವಕರ ಮೇಲೆ ತಂದೆಯಿಂದ ಮಾರಣಾಂತಿಕ ಹಲ್ಲೆ

ಮಂಡ್ಯದ ಕೆಆರ್‌ ಪೇಟೆ ತಾಲೂಕಿನ ಬೊಮ್ಮಾಲಪುರ ಗ್ರಾಮದಲ್ಲಿ ಮಗಳ ಲವ್ ಮ್ಯಾರೇಜ್‌ಗೆ ಸಹಾಯ ಮಾಡಿದ್ದಕ್ಕೆ ಯುವಕರ ಮೇಲೆ ತಂದೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸೈಜ್​ ಕಲ್ಲಿನಿಂದ ಕಾಲು ಜಜ್ಜಿ, ವಿವಸ್ತ್ರಗೊಳಿಸಿ ಗುಂಪು ಹಲ್ಲೆ ನಡೆಸಿ ವೀಡಿಯೊ ಮಾಡಿಕೊಂಡ ಘಟನೆ ನಡೆದಿದೆ.

ಈಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಬೊಮ್ಮಾಲಪುರ ಗ್ರಾಮದ ನಿಂಗಣ್ಣ ಅವರ ಮಗಳು ಪ್ರೀತಿಸಿ ಮದುವೆಯಾಗಿದ್ದಳು. ಇದಕ್ಕೆ ಸಹಾಯ ಮಾಡಿದ್ದ ಯುವಕ ಪ್ರಕಾಶ್ ಮತ್ತು ಅವನ ಬಾಮೈದ ನವೀನ್ ಮೇಲೆ ಯುವತಿಯ ತಂದೆ ನಿಂಗಣ್ಣ ಮತ್ತು ಕುಟುಂಬ ಸೇಡು ತೀರಿಸಿಕೊಂಡಿದ್ದಾರೆ. ಫೆಬ್ರವರಿ 21ರಂದು ಇದೇ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ನಡೆದಿತ್ತು. ಯುವತಿಯ ತಂದೆ ಹಾಗೂ ಇತರೆ ಆರೋಪಿಗಳು ಹಲ್ಲೆ ನಡೆಸಿದ್ದು, ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿ, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೊಮ್ಮಲಾಪುರ ಗ್ರಾಮದ ಪ್ರಕಾಶ್ ಹಾಗೂ ಆತನ ಬಾಮೈದ ನವೀನ್ ಮೇಲೆ ಗಿರೀಶ್, ಸಂಜು, ಗಣೇಶ್, ಪುಟ್ಟರಾಜು ಹಾಗೂ ನಿಂಗಣ್ಣ ಸೇರಿಕೊಂಡು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಯುವತಿಯ ಮದುವೆಗೆ ಸಹಕರಿಸಿದ ಪ್ರಕಾಶ್​ಗೆ ಆಕೆಯ ತಂದೆ ನಿಂಗಣ್ಣ ಮತ್ತು ಸಂಜು ಸೇರಿ ಹಲವರು ಫೋನ್ ಮಾಡಿ ನಿಂದಿಸಿದ್ದರು. ಇದರಿಂಗ ಕೋಪಗೊಂಡ ಪ್ರಕಾಶ್, ನವೀನ್​ನೊಂದಿಗೆ ಸೇರಿ ಫೆಬ್ರವರಿ 21ರಂದು ಸಂಜು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಈ ಬಗ್ಗೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಕಾರಣಕ್ಕೆ ಫೆಬ್ರವರಿ 22ರಂದು ಸಂಜು ಮತ್ತು ಗಿರೀಶ್ ತಂಡ ಪ್ರಕಾಶ್ ಹಾಗೂ ನವೀನ್ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ಪ್ರಮುಖ ಆರೋಪಿ ಗಿರೀಶ್ ಅವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *