ವಿಜಯಪುರ ಜಿಲ್ಲೆಯ ಕಗ್ಗೋಡ ಗ್ರಾಮದ ಬಳಿಯ 52ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಬೈಕ್‌ಗೆ ಲಾರಿ ಡಿಕ್ಕಿಯಾಗಿ ತಂದೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ವೆಂಕು ಚವ್ಹಾಣ (43). ಮೃತ ಬೈಕ್ ಸವಾರ. ಈ ಅಪಘಾತದಲ್ಲಿ ಪುತ್ರಿಯರಾದ ಐಶ್ವರ್ಯಾ, ಪ್ರೀತಿ ಹಾಗೂ ಪಕ್ಕದ ಮನೆ ನಿವಾಸಿ ಶ್ವೇತಾ ರಾಠೋಡ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಜಯಪುರ ನಗರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಮಟಗಿ ತಾಂಡಾದಿಂದ ಇಬ್ಬರು ಮಕ್ಕಳು ಹಾಗೂ ಪಕ್ಕದ ಮನೆ ನಿವಾಸಿಯನ್ನು ಕಗ್ಗೋಡದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ತೆಲಂಗಾಣ ಮೂಲದ ಲಾರಿ ಡಿಕ್ಕಿಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.