Menu

ಪತ್ನಿ ಸಾವಿನಿಂದ ನೊಂದು ಇಬ್ಬರು ಮಕ್ಕಳ ಕೊಂದು ತಂದೆ ಆತ್ಮಹತ್ಯೆ

davanagere

ದಾವಣಗೆರೆ: ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ದಾವಣಗೆರೆಯ ಎಸ್ ಪಿಎಸ್ ನಗರದಲ್ಲಿ ನಡೆದಿದೆ.

ಮಕ್ಕಳಾದ ಸಿಂಧುಶ್ರೀ (4), ಶ್ರೀಜಯ್‌ (3)ನನ್ನು ಕೊಲೆಗೈದು ಬಳಿಕ ತಂದೆ ಉದಯ್‌ (35) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೆಲ ತಿಂಗಳ ಹಿಂದೆ ಉದಯ್‌ ಪತ್ನಿ ಅನಾರೋಗ್ಯದಿಂದ ಅಕಾಲಿಕವಾಗಿ ಮೃತಪಟ್ಟಿದ್ದರು. ಪತ್ನಿ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದ ಪತಿ ಉದಯ್‌, ಗುರುವಾರ ಮಕ್ಕಳನ್ನು ಕೊಂದ ಬಳಿಕ ತಾನೂ ನೇಣಿಗೆ ಶರಣಾಗಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ನಿವಾಸಿ ಹೇಮಾ ಹಾಗೂ ಉದಯ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಕಳೆದ 8 ತಿಂಗಳ ಹಿಂದೆ ಪತ್ನಿ ಹೇಮಾ ಹೃದಯಾಘಾತದಿಂದ ಮೃತಪಟ್ಟಿದ್ದರು.

ಪ್ರೀತಿಸಿ ಕೈಹಿಡಿದಾಕೆ ಶಾಸ್ವತವಾಗಿ ಬೊಟ್ಟು ಹೋಗಿದ್ದರಿಂದ ಉದಯ್​ ನೋವಿನಲ್ಲಿದ್ದ. ಕೊನೆಗೆ ನೋವು ಕಡೆದುಕೊಳ್ಳಲಾಗದೇ ಸಾವಿನ ತೀರ್ಮಾನ ಕೈಗೊಂಡಿದ್ದಾರೆ. ನೇಣಿಗೆ ಶರಣಾಗುವ ಮೊದಲು ರಕ್ತದಲ್ಲಿ ಐಲವ್​ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆ ಮೇಲೆ ಬರೆದಿದ್ದಾರೆ.

ಉದಯ್ ಆರ್ ಎಸ್ ಎಸ್ ಶಾಖೆಗಳಿಗೆ ಭೇಟಿ ನೀಡುತ್ತಿದ್ದು, ಪತ್ನಿ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಉದಯ್ ಗೆ ಆರ್ ಎಸ್ ಎಸ್ ಮುಖಂಡರು ಬುದ್ದಿವಾದ ಹೇಳಿದ್ದರು ಎಂದು ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *