ಧಾರಾಕಾರ ಸುರಿದ ಬಾರಿ ಮಳೆಗೆ ಸಂಪೂರ್ಣ ಬೆಳೆಗಳು ಹಾನಿಯಾಗಿದ್ದು, ನಷ್ಟದಿಂದ ಬೇಸತ್ತು ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಸುಂಬಡ ಗ್ರಾಮದಲ್ಲಿ ಶುಕ್ರವಾರ ಮೌನೇಶ (25) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ.
ರೈತ ಮೌನೇಶ ಕೃಷಿ ಚಟುವಟಿಕೆಗಾಗಿ ಕೆನರಾ ಬ್ಯಾಂಕ್ 48 ಸಾವಿರ ರೂ. ಪ್ರಾಥಮಿಕ ಸಹಕಾರ ಸಂಘ ಸುಂಬಡ 1ಲಕ್ಷ ರೂ. ಎಲ್- ಟಿ ಫೈನಾನ್ಸ್ 50 ಸಾವಿರ ರೂ ಮತ್ತು ಧರ್ಮ ಸ್ಥಳ ಸಂಘದಲ್ಲಿ 1ಲಕ್ಷ ರೂ. ವರೆಗೂ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ.
ರೈತ ಮಾಡಿರೋ ಸಾಲಮನ್ನಾ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟನೆ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.