ಬೆಂಗಳೂರು: ಕಡಿಮೆ ಆದಾಯದ ಮಧ್ಯಮ ಬಡ ವರ್ಗದ ಜನ, ಆದಾಯವೇ ಇಲ್ಲದ ವಿದ್ಯಾರ್ಥಿಗಳ ದಿನನಿತ್ಯದ ಓಡಾಟಕ್ಕೆ ಮೆಟ್ರೋ ದುಬಾರಿಯಾಗಿದ್ದು,ಮೆಟ್ರೋ ಪ್ರಯಾಣವನ್ನೇ ನಿಲ್ಲಿಸಿದ್ದಾರೆ.
ಇದರಿಂದ ಗಣನೀಯ ಪ್ರಮಾಣದಲ್ಲಿ ಮೆಟ್ರೋ ಸವಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ದರ ಹೆಚ್ಚಳದ ಬಳಿಕ ಪ್ರತಿದಿನ ಸರಾಸರಿ 13% ರಷ್ಟು ಪ್ರಯಾಣಿಕರು ಕಡಿಮೆಯಾಗಿದ್ದಾರೆ. ದರ ಹೆಚ್ಚಳಕ್ಕೆ ಮೊದಲು, ದಿನಕ್ಕೆ ಸರಾಸರಿ 8.2 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. ದರ ಹೆಚ್ಚಳದ ನಂತರದ 20 ದಿನಗಳಲ್ಲಿ, ಈ ಸಂಖ್ಯೆ 7.1 ಲಕ್ಷಕ್ಕೆ ಇಳಿದಿದೆ.
ಈ ವರ್ಷದ ಜನವರಿಯಲ್ಲಿ 2.5 ಕೋಟಿ ಪ್ರಯಾಣಿಕರಿದ್ದರೆ, ಟಿಕೆಟ್ ಹೆಚ್ಚಾದ ಫೆಬ್ರವರಿಯಲ್ಲಿ 2 ಕೋಟಿಗೆ ಇಳಿದಿದೆ. ಇದರರ್ಥ ಫೆಬ್ರವರಿಯಲ್ಲಿ ತಿಂಗಳಿಗೆ 20% ರಷ್ಟು ಪ್ರಯಾಣಿಕರ ಇಳಿಕೆ ಕಂಡುಬಂದಿದೆ. ಬಿಎಂಆರ್ ಸಿಎಲ್ ಪ್ರಕಾರ, ಮೆಟ್ರೋದಲ್ಲಿ ಪ್ರಯಾಣಿಸುವವರ ಸರಾಸರಿ ದರ ಹೆಚ್ಚಳ 46% ಇದೆ. ಆದರೆ, ಕೆಲವು ಮಾರ್ಗಗಳಲ್ಲಿ 110% ರಷ್ಟು ಹೆಚ್ಚಳ ಆಗುತ್ತಿತ್ತು ಎಂದು ಪ್ರಯಾಣಿಕರು ದೂರಿದ್ದಾರೆ.
ದರ ಇಳಿಕೆ ದೂರದ ಪ್ರಯಾಣಕ್ಕೆ ಲಾಭವಾಗಿಲ್ಲ ಜನರ ಒತ್ತಡಕ್ಕೆ ಮಣಿದ ಬಿಎಂಆರ್‌ಸಿಎಲ್ ಸರ್ಕಾರದ ಸೂಚನೆ ಮೇರೆಗೆ, ಕೆಲವು ಹಂತಗಳಲ್ಲಿ ದರಗಳನ್ನು ಪರಿಷ್ಕರಿಸಿತು. ಆದರೆ ದೂರದ ಪ್ರಯಾಣಿಕರಿಗೆ ಈ ಬದಲಾವಣೆ ಸಹಾಯಕವಾಗಿಲ್ಲ ಎಂಬ ದೂರುಗಳಿವೆ.
ಪರಿಷ್ಕೃತ ದರಗಳ ಪ್ರಕಾರ, ಮೆಟ್ರೋದ ಕನಿಷ್ಠ ದರ 10 ರೂಪಾಯಿ ಮತ್ತು ಗರಿಷ್ಠ ದರ 90 ರೂಪಾಯಿ. ದರ ಪರಿಷ್ಕರಣೆಯ ನಂತರವೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಫೆಬ್ರವರಿ 23 ರಂದು ಕೇವಲ 4.9 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
ದರ ಹೆಚ್ಚಳದ ನಂತರ, ಫೆಬ್ರವರಿ 10 ಮತ್ತು 24 ರಂದು ಮಾತ್ರ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 8 ಲಕ್ಷ ದಾಟಿದೆ. ದರ ಹೆಚ್ಚಳದಿಂದಾಗಿ, ಸಾವಿರಾರು ಪ್ರಯಾಣಿಕರು ಖಾಸಗಿ ವಾಹನಗಳು ಹಾಗೂ ಬಿಎಂಟಿಸಿ ಬಸ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ.
ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಅಂಕಿಅಂಶ ಮತ್ತು ಪ್ರಯಾಣಿಕರ ಸಂಖ್ಯೆಯ ಮೇಲಿನ ಪರಿಣಾಮವನ್ನು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಮೆಟ್ರೋ ದರ ಹೆಚ್ಚಳವನ್ನು ಮರುಪರಿಶೀಲಿಸುತ್ತದೆಯೇ ಎಂಬ ಪ್ರಶ್ನೆಗೆ, ಅವರು ಪ್ರತಿಕ್ರಿಯೆ ಕೊಡಲು ನಿರಾಕರಿಸಿದ್ದಾರೆ.