Menu

ಗಂಡನ ವಿರುದ್ಧ ಸುಳ್ಳು ವರದಕ್ಷಿಣೆ ಕೇಸ್: ಪತ್ನಿಗೆ 1.8 ಕೋಟಿ ರೂ. ದಂಡ ವಿಧಿಸಿದ ಕೋರ್ಟ್‌

ಗಂಡನ ವಿರುದ್ಧ ಸುಳ್ಳು ವರದಕ್ಷಿಣೆ ಕೇಸ್​ ದಾಖಲಿಸಿದ್ದ ಮಹಿಳೆಯೊಬ್ಬಳಿಗೆ ಉತ್ತರ ಪ್ರದೇಶದ ಗುರುಗ್ರಾಮದ ಕೋರ್ಟ್​ 1.8 ಕೋಟಿ ರೂಪಾಯಿಗಳ ದಂಡ ವಿಧಿಸಿದೆ.

ಇಂಗ್ಲೆಂಡ್​ ಮೂಲದ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿ ವಿರುದ್ಧ ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಪರಿಹಾರಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದ. ಕಾರಣವಿಲ್ಲದೆ ತನ್ನನ್ನು  ಕೇಸ್​ನಲ್ಲಿ ಪತ್ನಿ ಸಿಲುಕಿಸಿರುವ ಬಗ್ಗೆ ಸಾಕ್ಷಿ ಸಹಿತ ದಾಖಲೆ ಒದಗಿಸಿದ್ದ. ಈ ರೀತಿ ಮಾನಸಿಕವಾಗಿ ಹಿಂಸೆ ನೀಡಿದಾಕೆ ತನಗೆ 1.80 ಕೋಟಿ ಪರಿಹಾರ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ.

ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶ ಮನೀಶ್ ಕುಮಾರ್, ಪತಿಯ ಅರ್ಜಿಯನ್ನು ಮಾನ್ಯ ಮಾಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ಈ ರೀತಿ ಸುಳ್ಳು ಕೇಸು ದಾಖಲು ಮಾಡಿ ಮಹಿಳಾ ಪರ ಕಾನೂನುಗಳ ದುರ್ಬಳಕೆ ಬಗ್ಗೆ ಕೋರ್ಟ್​ ಕಳವಳ ವ್ಯಕ್ತಪಡಿಸಿದೆ.

ಗುರುಶರಾಮ್ ಲಾಲ್ ಅವಸ್ಥಿ ಎಂಬಾತನ ವಿರುದ್ಧ ಪತ್ನಿ ಕ್ರಿಮಿನಲ್​ ಕೇಸ್​ ದಾಖಲಿಸಿದ್ದಳು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A (ಕ್ರೌರ್ಯ), 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಆತ ವಾದಿಸಿದ್ದರು. 2016 ರಲ್ಲಿ ಕೆಳ ನ್ಯಾಯಾಲಯ ಆತನ ಪರ ಆದೇಶ ಹೊರಡಿಸಿತ್ತು. ಆದರೆ ಪತ್ನಿ 2018 ರಲ್ಲಿ ಸೆಷನ್ಸ್ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಳು. ಅಲ್ಲಿಯೂ ಆತನ ಪರ ಆದೇಶ ಬಂದಿತ್ತು.

ಇಷ್ಟು ಕಿರುಕುಳ ನೀಡಿದ ಮಾಜಿ ಪತ್ನಿಯನ್ನು ಸುಮ್ಮನೆ ಬಿಡಬಾರದು ಎಂದು 16 ವರ್ಷಗಳ ಕಾನೂನು ಹೋರಾಟದಲ್ಲಿ ಆಗಿರುವ ಆರ್ಥಿಕ ನಷ್ಟ ಮತ್ತು ವೈಯಕ್ತಿಕ ನೋವನ್ನು ಉಲ್ಲೇಖಿಸಿ, ದುರುದ್ದೇಶಪೂರಿತ ಕೇಸ್‌ ದಾಖಲಿಸಿದ್ದ ಮಾಜಿ ಪತ್ನಿಯ ವಿರುದ್ಧ ಸಿವಿಲ್ ಮೊಕದ್ದಮೆ ದಾಖಲಿಸಿದ್ದ. ಅದನ್ನು ಪುರಸ್ಕರಿಸಿದ ಕೋರ್ಟ್​ ಪರಿಗಣಿಸಿ, ಪತ್ನಿಗೆ ದಂಡ ವಿಧಿಸಿದೆ.

Related Posts

Leave a Reply

Your email address will not be published. Required fields are marked *