Thursday, February 12, 2026
Menu

ಪೂಜೆ, ಚಿಕಿತ್ಸೆ ಹೆಸರಲ್ಲಿ ವಿಷ ಲಡ್ಡು ತಿನ್ನಿಸಿ ಆರು ಮಂದಿಯ ಕೊಲೆಗೈದ ಫಕೀರ್ ಬಾಬಾ ಅರೆಸ್ಟ್‌

ಇತ್ತೀಚೆಗೆ ದೆಹಲಿಯ ಪೀರಾಗಢಿಯಲ್ಲಿ ಪಾರ್ಕ್ ಮಾಡಿದ್ದ ಕಾರಿನೊಳಗೆ ಮೂರು ಶವಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಫಕೀರ್ ಬಾಬಾ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲೂ ಇದೇ ರೀತಿ ಕನಿಷ್ಠ ಐದು ಕೊಲೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆತ ಆರು ಕೊಲೆ ಮಾಡಿರುವುದು ಪತ್ತೆಯಾಗಿದೆ. ಫಿರೋಝಾಬಾದ್ ನಿವಾಸಿಮರುದ್ದೀನ್ ಅಲಿಯಾಸ್ ‘ಬಾಬಾ’ ಆರೋಪಿಯಾಗಿದ್ದು, ಪೂಜೆ, ಆಧ್ಯಾತ್ಮಿಕ ಚಿಕಿತ್ಸೆ ಹೆಸರಿನಲ್ಲಿ ಜನರಿಗೆ ವಿಷ ಬೆರೆಸಿದ ಲಡ್ಡುಗಳನ್ನು ತಿನ್ನಿಸುತ್ತಿದ್ದ ಎನ್ನಲಾಗಿದೆ.

ಪೀರಾಗಢಿಯಲ್ಲಿ 76 ವರ್ಷದ ರಣಧೀರ್, 47 ವರ್ಷದ ನರೇಶ್ ಸಿಂಗ್ ಮತ್ತು 40 ವರ್ಷದ ಲಕ್ಷ್ಮಿ ದೇವಿ ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದರು. ಇವರ ಜೊತೆ ಫಕೀರ್ ಬಾಬಾ ಇದ್ದ. ಆತನೇ ಇವರಿಗೆ ವಿಷದ ಸಿಹಿತಿಂಡಿಗಳನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫಿರೋಝಾಬಾದ್‌ನಲ್ಲಿ ಫಕೀರ್ ಬಾಬಾ ನೀಡಿದ ವಿಷದ ಲಡ್ಡುಗಳನ್ನು ತಿಂದ ನಂತರ ಇಬ್ಬರು ಮೃತಪಟ್ಟಿದ್ದರು, ಅಂತದ್ದೇ ಪ್ರಕರಣ ಧೋಲ್‌ಪುರ್‌ನಲ್ಲೂ ದಾಖಲಾಗಿತ್ತು.

ಫಿರೋಝಾಬಾದ್‌ನಲ್ಲಿ. 2025ರ ಮೇ ತಿಂಗಳಲ್ಲಿ ರಾಮ್ ಲಖನ್ ಎಂಬವರು ದೂರು ನೀಡಿ, ಸಂಬಂಧಿಕರ ಮಗನೊಬ್ಬ ಫಕೀರ್ ಬಾಬಾನ ಸಂಪರ್ಕದಲ್ಲಿದ್ದ. ತಾನು ದೆವ್ವ ಬಿಡಿಸುವುದಾಗಿ ಮತ್ತು ಪೂಜೆಗಳ ಮೂಲಕ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವುದಾಗಿ ಬಾಬಾ ಹೇಳಿಕೊಂಡಿದ್ದ. 2025ರ ಮೇ 8 ರಂದು ಯುವಕನನ್ನು ಬಾಬಾ ಮನೆಗೆ ಕರೆದೊಯ್ದಿದ್ದ. ನಿಗೂಢ ಪೂಜೆಗಳಿಂದ ಕಷ್ಟಗಳು ದೂರವಾಗುತ್ತವೆ ಎಂದು ಭರವಸೆ ನೀಡಿದ್ದ. ಮರುದಿನ ಯುವಕನ ಶವ ಪತ್ತೆಯಾಗಿತ್ತು. ಘಟನಾ ಸ್ಥಳದಲ್ಲಿ ಕನ್ನಡಕ, ಲಡ್ಡುಗಳು ಮತ್ತು ಪೂಜಾ ಸಾಮಗ್ರಿಗಳು ಸಿಕ್ಕಿದ್ದವು.

Related Posts

Leave a Reply

Your email address will not be published. Required fields are marked *