ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ನಕಲಿ ನರ್ಸ್ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಆರೋಪ ಕೇಳಿ ಬಂದಿದೆ. ನರ್ಸಿಂಗ್ ವಿದ್ಯಾರ್ಥಿನಿ ಎಂದು ಹೇಳಿ ಕಳೆದ ಮೂರು ತಿಂಗಳಿನಿಂದ
ರೋಗಿಗಳಿಗೆ ಕಾರವಾರ ಮೂಲದ ಸನಾ ಶೇಖ್ ಎಂಬಾಕೆ ಚಿಕಿತ್ಸೆ ನೀಡಿರುವುದು ಅಚ್ಚರಿ ಹುಟ್ಟಿಸಿದೆ.
ಬೆಳಗಾವಿ ಕುಮಾರಸ್ವಾಮಿ ಲೇಔಟ್‌ನಲ್ಲಿ ನಕಲಿ ನರ್ಸ್ ಸನಾ ವಾಸ ಇರುವುದು ಎನ್ನಲಾಗಿದೆ. ಸರ್ಜಿಕಲ್ ವಾರ್ಡ್, ಒಪಿಡಿ ಹೀಗೆ ಆಸ್ಪತ್ರೆಯ ಎಲ್ಲ ವಿಭಾಗದಲ್ಲೂ ಓಡಾಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾಳೆ.
ನಕಲಿ ನರ್ಸ್ ಸನಾ ಚಿಕಿತ್ಸೆ ಬಗ್ಗೆ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಸಂಸ್ಥೆಯ ನಿರ್ದೇಶಕರ ಹೆಸರು ಹೇಳಿ ಧಮ್ಕಿ ಹಾಕಿದ್ದಾಳೆ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೆಕ್ಯೂರಿಟಿ ಗಾರ್ಡ್ ಕೈಗೆ ಆಗಿ ಸಿಕ್ಕಿಬಿದ್ದ ನಕಲಿ ನರ್ಸ್ ವಿಚಾರಣೆ ವೇಳೆ ಬೇರೊಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿರುವ ವಿಭಾಗವೊಂದರ ಹೆಡ್ ಕುಮ್ಮಕ್ಕಿಂದ ಆಕೆ ಬಿಮ್ಸ್‌ನಲ್ಲಿ ಹೀಗೆ ಹುಚ್ಚಾಟ ನಡೆಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಬಿಮ್ಸ್
ಆಡಳಿತ ನಿರಾಕರಿಸಿದೆ.
ರಸ್ತೆ ಅಪಘಾತಕ್ಕೆ ಯುವಕರಿಬ್ಬರು ಬಲಿ
ಬೆಳಗಾವಿ ಸವದತ್ತಿ ತಾಲೂಕಿನ ಹಲಕಿ-ಮುರಗೋಡ ರಸ್ತೆಯಲ್ಲಿ ಅಪಘಾತವಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುರಗೋಡ ಗ್ರಾಮದ ಹೊರವಲಯದಲ್ಲಿ ಅಪರಿಚಿತ ವಾಹನ ಬೈಕ್ ಸವಾರರ ತಲೆಯ ಮೇಲೆ ಹರಿದು ಈ ದುರಂತ ನಡೆದಿದೆ. ಮೃತ ಯುವಕರನ್ನು ಸವದತ್ತಿ ತಾಲೂಕಿನ ಹುಲಿಕೇರಿ ತಾಂಡಾದ ನಿವಾಸಿಗಳಾದ ವಿಶಾಲ ಲಮಾಣಿ (20) ಮತ್ತು ಅಪ್ಪು ಲಮಾಣಿ (23) ಎಂದು ಗುರುತಿಸಲಾಗಿದೆ.