ಚಿಕ್ಕಬಳ್ಳಾಪುರದಲ್ಲಿ ಯುವಕನೊಬ್ಬ ವಿವಾಹಿತ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ, ಆಕೆಯ ಮಕ್ಕಳಿಬ್ಬರು ಈಗ ಅನಾಥರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ತೇಜಸ್ವಿನಿ ಎಂಬಾಕೆ ಗಂಡನಿಂದ ದೂರವಾಗಿ ಇನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತಿದ್ದರು.
ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಹೋಟೆಲ್‌ನವರೇ ಕೊಟ್ಟಿದ್ದ ಒಂದು ರೂಂನಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಅಲ್ಲಿ ಪರಿಚಯವಾದ ಸಂದೀಪ್ ಎಂಬ ಯುವಕ ಆಕೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಅವರಿಬ್ಬರ ನಡುವೆ ನಡೆದ ಜಗಳದಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ. ಆಕೆಯ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ಒಂದು ತಿಂಗಳ ಹಿಂದೆ ತೇಜಸ್ವಿನಿ ಹಾಗೂ ಸಂದೀಪ್ ಇಬ್ಬರು ಸೇರಿ ಬೇರೆ ಮನೆ ಮಾಡಿ ಹೊಸ ಜೀವನ ಶುರು ಮಾಡಿದ್ದರು. ಕಳೆದ 2 ದಿನಗಳ ಹಿಂದೆ ತೇಜಸ್ವಿನಿಯ ಸ್ನೇಹಿತೆ ಅರುಣಾ ಅವರ ಮನೆಯಲ್ಲಿ ಉಳಿದುಕೊಂಡಿದ್ದಾಗ ಅಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಕುಡಿದ ಅಮಲಿನಲ್ಲಿ ಸಂದೀಪ್ ಮೇಲೆ ತೇಜಸ್ವಿನಿ ಹಲ್ಲೆ ಮಾಡಿದ್ದು. ಸಂದೀಪ್ ಮದ್ಯದ ಪಾಕೆಟ್ ಕಟ್ ಮಾಡಲು ಇಟ್ಟುಕೊಂಡಿದ್ದ ಚಾಕುವನ್ನು ತೇಜಸ್ವಿನಿ ಕಡೆ ಬೀಸಿದ್ದಾನೆ. ಚಾಕು ಆಕೆಗೆ ತಾಗಿ ಗಾಯವಾಗಿ ತೀವ್ರ ರಕ್ತಸ್ರಾವ ಆಗಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದು, ಮತ್ತೆ ಮನೆಗೆ ಬಂದ ತೇಜಸ್ವಿನಿ ಮಾತ್ರೆ, ಔಷಧಿ ಬದಲು ಮದ್ಯ ಸೇವಿಸಿ ಮಲಗಿದ್ದರಂತೆ. ಗಾಯ ಸೆಫ್ಟಿಕ್ ಆಗಿ ಹೊಟ್ಟೆಯೆಲ್ಲಾ ಇನ್ಫೆಕ್ಷನ್ ಆಗಿ ಮರಳಿ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.


