Menu

ಎಲೆಕ್ಷನ್‌ಗಾಗಿ ಅಬಕಾರಿ ಸುಂಕ ಇಳಿಸಿ ತೈಲ ಬೆಲೆ ಜಾಸ್ತಿ: ನಮ್ಮ ಕೊಲೆ ಮಾಡುತ್ತಿರುವ ಕೇಂದ್ರವೆಂದು ಡಿಸಿಎಂ ಕಿಡಿ

ಎಲೆಕ್ಷನ್​ಗಾಗಿ ತೈಲ ಅಬಕಾರಿ ಸುಂಕ ಕಡಿಮೆ ಮಾಡಿ, ತೈಲ ಬೆಲೆ ಜಾಸ್ತಿ ಮಾಡಿಬಿಟ್ಟು ಕೇಂದ್ರ ನಮ್ಮನ್ನು ಕೊಲೆ ಮಾಡುತ್ತಿದೆ. ಕಂಪನಿಯವರು ಕೂಡ ಬೆಲೆ ಜಾಸ್ತಿ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂಪಾಯಿ ಮತ್ತು ಡೀಸೆಲ್‌ ಸುಂಕ ಶೂನ್ಯಕ್ಕೆ ಇಳಿದಿದೆ. ಕೇಂದ್ರ ತೈಲ ಬೆಲೆ ಏರಿಕೆ ಮಾಡುತ್ತಿದೆ. ಈ ಮೂಲಕ ನಮ್ಮ ಕೊಲೆ ಮಾಡುತ್ತಿದೆ ಎಂದು ಡಿಸಿಎಂ ಹೇಳಿದ್ದಾರೆ. ಈ ಬಗ್ಗೆ ಸುರ್ಜೇವಾಲಾ, ಸಿಎಂ ಅವರೊಂದಿಗೆ ಮಾತನಾಡುವೆ ಎಂದರು.

ಐಪಿಎಲ್ ಟಿಕೆಟ್‌ಗೆ ಶಾಸಕರ ಬೇಡಿಕೆ ಕುರಿತು ಮಾತನಾಡಿದ ಡಿಸಿಎಂ, ಶಾಸಕರ ಬೇಡಿಕೆ ಸರಿ ಇದೆ. ಶಾಸಕರು ಕೂಡ ವ್ಯವಸ್ಥೆಯ ಭಾಗ. ನಮ್ಮ ಶಾಸಕರಿಗೆ ವ್ಯವಸ್ಥೆ ಮಾಡಬೇಕು. ನಾನು ಕೆಎಸ್‌ಸಿಎ ಅಧ್ಯಕ್ಷರ ಜೊತೆ ಇಂದು ಮಾತಾಡುವೆ ಎಂದು ಹೇಳಿದರು.

ಶಾಸಕರಿಂದ ಐಪಿಎಲ್ ಟಿಕೆಟ್ ಬೇಡಿಕೆ ವಿರೋಧಿಸಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ತೇಜಸ್ವಿ ಸೂರ್ಯ ತನ್ನ ಜ್ಞಾನವನ್ನು ಅವರ ಪಾರ್ಟಿ ಅವರಿಗೆ ಹೇಳಲಿ, ನಮಗೆ ಅಲ್ಲ ಎಂದರು.

ಐಪಿಎಲ್ ಪಂದ್ಯಗಳಿಗೆ ಶಾಸಕರಿಗೆ 5 ವಿಐಪಿ ಟಿಕೆಟ್ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಸದನದಲ್ಲಿ ಐಪಿಎಲ್ ಟಿಕೆಟ್​ಗೆ ಬೇಡಿಕೆ ಇಡುವುದು ವಿಧಾನಸಭೆಯ ಘನತೆಗೆ ಕುಂದು ಉಂಟು ಮಾಡಿದಂತೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *