ಖಾಸಗಿ ಕಂಪನಿಯೊಂದರ ಉದ್ಯೋಗಿ 40 ವರ್ಷದ ಶಂಕರ್ ಎಂಬವರು ಬೆನ್ನು ನೋವು ಎಂದು ಸಿಕ್ ಲೀವ್ ಕೇಳಿ ಬಾಸ್‌ಗೆ ಮೆಸೇಜ್ ಮಾಡಿದ ಹತ್ತೇ ನಿಮಿಷಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಾಸ್ ಕೆ. ವಿ. ಅಯ್ಯರ್ ಎಂಬವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ.
ಬೆಳಿಗ್ಗೆ 8:37ಕ್ಕೆ ಶಂಕರ್ ಅವರು ಬಾಸ್ ಕೆ. ವಿ. ಅಯ್ಯರ್ ಅವರಿಗೆ ಬೆನ್ನು ನೋವು ಎಂದು ಸಿಕ್ ಲೀವ್ ಕೇಳಿ ಮೆಸೇಜ್ ಮಾಡಿದ್ದರು. ಅಯ್ಯರ್ ತಕ್ಷಣ ವಿಶ್ರಾಂತಿ ತೆಗೊಳ್ಳಿ ಎಂದು ರಜೆ ಅನುಮೋದಿಸಿದ್ದರು. ಬೆಳಿಗ್ಗೆ 11 ಗಂಟೆಗೆ ಶಂಕರ್ ಅವರ ಸಾವಿನ ಸುದ್ದಿ ಅಯ್ಯರ್ ಅವರಿಗೆ ತಲುಪಿದೆ.
ಸುದ್ದಿ ಕೇಳಿ ಆಘಾತಗೊಂಡ ಅಯ್ಯರ್ ಅವರು ಸಹೋದ್ಯೋಗಿಯೊಬ್ಬರನ್ನು ಸಂಪರ್ಕಿಸಿ ಖಚಿತಪಡಿಸಿಕೊಂಡು ಶಂಕರ್ ಮನೆಗೆ ಧಾವಿಸಿದ್ದರು. “ಶಂಕರ್ ಕಳೆದ ಆರು ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡುತ್ತಿದ್ದು, ತುಂಬಾ ಆರೋಗ್ಯವಂತರಾಗಿ ದ್ದರು. ಫಿಟ್‌ನೆಸ್‌ಗೆ ಮಾದರಿಯಾಗಿ ಇತರರಿಗೂ ತೋರಿಸುತ್ತಿದ್ದೆ. ಆದರೆ ಬೆಳಿಗ್ಗೆ 8:37ಕ್ಕೆ ಸಿಕ್ ಲೀವ್ ಕೇಳಿ ಮೆಸೇಜ್ ಮಾಡಿದ 10 ನಿಮಿಷಗಳಲ್ಲಿ, ಅಂದರೆ 8:47ಕ್ಕೆ ಮೃತಪಟ್ಟಿದ್ದಾರೆ. ಜೀವನ ಎಷ್ಟು ಅನಿಶ್ಚಿತ ಎಲ್ಲರೂ ಕರುಣೆ ಮತ್ತು ತಾಳ್ಮೆಯಿಂದ ಇರಿ.” ಎಂದು ಮೆಸೇಜ್ ಮಾಡಿದ್ದಾರೆ.
ಶಂಕರ್ ಅವರಿಗೆ ಹೆಂಡತಿ ಮತ್ತು ಮಕ್ಕಳಿದ್ದು, ಸಿಗರೇಟ್ ಸೇವನೆ ಅಥವಾ ಮದ್ಯಪಾನ ಇತ್ಯಾದಿ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಆರೋಗ್ಯವಂತರಾಗಿದ್ದ ಶಂಕರ್ ಸಾವು ಕುಟುಂಬಸ್ಥರಿಗೆ ದೊಡ್ಡ ಆಘಾತ ನೀಡಿದೆ ಎಂದಿರುವ ಅಯ್ಯರ್, ಶಂಕರ್ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಮಗುವಿನ ಕೊಲೆಗೈದ ತಾಯಿ
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಬಳಿಯ ಬಾಲೂರ್ ಕಟ್ಟುವಿಲೈ ಪ್ರದೇಶದಲ್ಲಿ 40 ದಿನಗಳ ಹಿಂದೆ ಜನಿಸಿದ ಮಗುವನ್ನು ತಾಯಿಯೇ ಕೊಂದಿರುವ ಘಟನೆ ನಡೆದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ ಕೃತ್ಯವನ್ನು ಎಸಗಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಆರೋಪಿ ಮಹಿಳೆ ಬೆನಿತಾ ಜಯ ಅನ್ನಲ್ (20) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆನಿತಾ ಜಯ ಅನ್ನಲ್ ಕನ್ಯಾಕುಮಾರಿ ನಿವಾಸಿ, ವರ್ಷದ ಹಿಂದೆ ದಿಂಡಿಗಲ್ ಜಿಲ್ಲೆಯ ಉತ್ತರ ವೇದಚಂದೂರಿನ ನಾಗಕೋಣನೂರು ಪ್ರದೇಶದ ಕಾರ್ತಿಕ್ (21) ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇವರಿಗೆ 40 ದಿನಗಳ ಹಿಂದೆ ಒಂದು ಹೆಣ್ಣು ಮಗು ಜನಿಸಿತ್ತು. ಕಾರ್ತಿಕ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ವಿವಾಹದ ನಂತರ ಪತ್ನಿಯ ಮನೆಯಲ್ಲಿಯೇ ವಾಸವಾಗಿದ್ದ.
ಕಾರ್ತಿಕ್ ಎಂದಿನಂತೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಮರಳಿ ಮಗುವನ್ನು ಎತ್ತಿಕೊಂಡಾಗ ಚಲನೆ ಇಲ್ಲದಿರುವುದನ್ನು ಗಮನಿಸಿದ್ದ. ಗಾಬರಿಗೊಂಡ ಕಾರ್ತಿಕ್, ತಕ್ಷಣ ಮಗುವನ್ನು ಕರುಂಗಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದ. ಆದರೆ ವೈದ್ಯರು ಮಗು ಈಗಾಗಲೇ ಮೃತಪಟ್ಟಿವುದಾಗಿ ತಿಳಿಸಿದ್ದಾರೆ. ಮಗುವಿನ ಹಣೆಯ ಮೇಲೆ ಗಾಯವಿರುವುದನ್ನು ಗಮನಿಸಿದ ಕಾರ್ತಿಕ್, ಈ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದಾಗ, ಮಗು ಹಾಲು ಕುಡಿಯುವಾಗ ಕೆಳಗೆ ಬಿದ್ದು ಗಾಯಗೊಂಡಿದೆ ಎಂದು ಹೇಳಿದ್ದಳು.
ಕಾರ್ತಿಕ್ ಕರುಂಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸರಿಪಲ್ಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಶವಪರೀಕ್ಷೆ ವರದಿಯಲ್ಲಿ ಮಗು ಕೊಲೆಯಾಗಿರುವುದು ದೃಢಪಟ್ಟಿತ್ತು. ಮಗುವಿನ ಬಾಯಿಯಲ್ಲಿ ಟಿಶ್ಯೂ ಪೇಪರ್ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.