ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಕರೆತಂದ ಆನೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ನುಗ್ಗಿ ದಾಂಧಲೆ ಮಾಡಿದ್ದರಿಂದ ಜನರು ದಿಕ್ಕಾಪಾಲಾಗಿ ಓಡಿದ ಘಟನೆ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ತಾಲೂಕಿನ ಕಲ್ಲಹಳ್ಳಿ ಗ್ರಾಮಕ್ಕೆ ಹುಲಿ ಸೆರೆಗಾಗಿ ಕರೆತಂದಿದಂತಹ ಪಾರ್ಥಸಾರಥಿ ಎಂಬ ಗಂಡು ಸಾಕನೆ ಮದ ಏರಿದ ಹಿನ್ನೆಲೆ ಕಲ್ಲಹಳ್ಳಿ ಶಿಬಿರದಿಂಧ ತಪ್ಪಿಸಿಕೊಂಡು ಅಡ್ಡಾದಿಡ್ಡಿಯಾಗಿ ಪಟ್ಟಣದಲ್ಲಿ ಓಡಾಡಿದೆ.
ಪಟ್ಟಣದ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಓಡಾಡಿ ಆತಂಕ ಮೂಡಿಸಿದ ಪಾರ್ಥ ಸಾರಥಿ ಆನೆ ನಂತರ ಕೆಎಸ್ಸಾರ್ಟಿಸಿ ನಿಲ್ದಾಣದ ಆವರಣದ ಒಳಗಿಂದ ಸಾಗಿ ಪಟ್ಟಣದ ಹೊರವಲಯದ ಮಡಹಳ್ಳಿ ಕಲ್ಲು ಕೋರೆಯ ಬಳಿ ಸಾಗಿದೆ.
ಮದ ಏರಿದ ಆನೆಯನ್ನು ಹತೋಟಿಗೆ ತರಲು ಆನೆಯ ಮಾವುತ, ಕಾವಡಿ ಅರಣ್ಯ ಇಲಾಖೆ ಸಿಬ್ಬಂದಿ,ಅಧಿಕಾರಿ ವರ್ಗ ಪರದಾಟ ನಡೆಸಿದ್ದು, ಆನೆಯ ಚಲನವಲನಗಳನ್ನು ಗಮನಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿದರು.
ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮದದಲ್ಲಿ ಇರುವ ಆನೆಯನ್ನು ಹತೋಟಿಗೆ ತರಲಾಗುವುದು ಎಂದು ಗುಂಡ್ಲುಪೇಟೆ ಬಫರ್ ಜೂನ್ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ರವರು ಮಾಹಿತಿ ನೀಡಿದ್ದಾರೆ.


