ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೊಸಕೆರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳು ಕಾದಾಟ ನಡೆಸಿದ್ದು ಮಕನಾ ಆನೆ ಗಾಯಗೊಂಡಿದೆ.
ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳಾದ ಭೀಮ ಹಾಗೂ ಮಹೇಂದ್ರ ಮಕನಾ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸಹಕರಿಸಿದವು.
ಗಾಯಗೊಂಡಿದ್ದ ಮಕನಾ ಆನೆಗೆ ಚಿಕಿತ್ಸೆ ನೀಡಿದ ಬಳಿಕ ಅರಣ್ಯಾಧಿಕಾರಿಗಳು ಅದನ್ನು ಕಾಡಿಗೆ ಬಿಟ್ಟಿದ್ದಾರೆ. ನಾಗರಹೊಳೆ ಪಶುವೈದ್ಯಾಧಿಕಾರಿ ಡಾ.ರಮೇಶ್, ಡಾ.ಚೆಟ್ಟಿಯಪ್ಪ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಿದ್ದರು.
ದುಬಾರೆ ಡಿಆರ್‌ಎಫ್‌ಒ ರಂಜನ್, ನಾಗರಹೊಳೆ ಎಸಿಎಫ್ ಅನನ್ಯ ಕುಮಾರ್, ಆರ್‌ಎಫ್‌ಒ ಮಂಜುನಾಥ್, ಡಿಆರ್‌ಎಫ್‌ಒಗಳಾ ನವೀನ್ ರೌತ್, ಮಧುಸೂದನ್ ಹಾಗೂ ಸಿಬ್ಬಂದಿ ಮಕನಾ ಆನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದರು.