Menu

ಚುನಾವಣಾ ಅಕ್ರಮ: ರಾಹುಲ್‌ ಗಾಂಧಿಗೆ ಆರ್‌ ಅಶೋಕ್‌ ಐದು ಪ್ರಶ್ನೆಗಳೇನು

ಲೋಕಸಭಾ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಅಧಿಕಾರ ಇದ್ದದ್ದು ನಿಮ್ಮದೇ ಕಾಂಗ್ರೆಸ್ ಸರ್ಕಾರ. ಚುನಾವಣಾ ಆಯೋಗ ಕೂಡ ರಾಜ್ಯ ಸರ್ಕಾರದ ಅಧಿಕಾರಿಗಳನ್ನೇ ನಿಯೋಜನೆ ಮಾಡಿಕೊಂಡು ಕಾರ್ಯನಿರ್ವಹಿಸಿರುವುದು. ಹೀಗಿರುವಾಗ ಯಾವ ಆಧಾರದ ಮೇಲೆ ಬಿಜೆಪಿ ಪಕ್ಷವನ್ನ, ಪ್ರಧಾನ ಮಂತ್ರಿಗಳನ್ನ, ಕೇಂದ್ರ ಸರ್ಕಾರವನ್ನ ದೂಷಿಸುತ್ತಿದ್ದೀರಿ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳಗಳಂತೆ ಪ್ರತಿ ಬೂತ್‌ಗೆ ಕಾಂಗ್ರೆಸ್‌ ಪಕ್ಷ ಕೂಡ ಬಿಎಲ್‌ಎಗಳನ್ನು (ಬೂತ್‌ ಲೆವೆಲ್‌ ಏಜೆಂಟ್‌) ನೇಮಕ ಮಾಡಿತ್ತು. ಅವರನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ನೇಮಿಸಿರುತ್ತಾರೆ. ಮತದಾರರ ಪಟ್ಟಿಯ ಪ್ರತಿಯನ್ನು ಮತದಾನಕ್ಕೂ ಮುಂಚೆಯೇ ಎಲ್ಲ ಪಕ್ಷಗಳ ಬಿಎಲ್‌ಎಗ ಗಳಿಗೆ ನೀಡಲಾಗುತ್ತದೆ ಎಂಬ ಕನಿಷ್ಠ ಅರಿವು ರಾಹುಲ್ ಗಾಂಧಿ ಅವರಿಗೆ ಇಲ್ಲವೇ? ಕಾಂಗ್ರೆಸ್ ಪಕ್ಷದ BLA ಗಳು ಏನು ಮಾಡುತ್ತಿದ್ದರು?

ಪರಿಷ್ಕೃತ ಕರಡು ಮತದಾರರ ಪಟ್ಟಿ ಯಾವುದೇ ಚುನಾವಣೆಯ 3-4 ತಿಂಗಳು ಮುಂಚೆಯೇ ಪ್ರಕಟವಾಗುತ್ತದೆ. ಅದನ್ನು ಎಲ್ಲಾ ಪಕ್ಷಗಳಿಗೂ ನೀಡಲಾಗುತ್ತದೆ. ಅದನ್ನಿಟ್ಟುಕೊಂಡು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತದಾರರಿಗೆ ಚೀಟಿ ಕೂಡ ಕೊಟ್ಟು ಬರುತ್ತಾರೆ. ಹಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗೆ ಮೊದಲು ಏನು ಮಾಡುತ್ತಿತ್ತು?

ಚುನಾವಣಾ ಫಲಿತಾಂಶ ಬಂದಮೇಲೆ 45 ದಿನಗಳವರೆಗೆ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಆದರೆ ಅನುಮಾನ ಇರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾವಣೆ ಆದ ಒಂದು ವರ್ಷದವರೆಗೆ ಏನು ಮಾಡುತ್ತಿದ್ದರು? ಬಿಹಾರ ಚುನಾವಣೆಯ ಸೋಲಿಗೆ anticipatory bail ಪಡೆಯಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರಾ?

ಒಳಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆಗೆ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಯನ್ನು ಬಳಸಿಕೊಂಡು ಸಮೀಕ್ಷಾ ಕಾರ್ಯ ನಡೆಸಬೇಕು ಎಂದು ತಮ್ಮದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ನಿರ್ಧಾರ ಮಾಡಿದೆ. ಹಾಗಾದರೆ ಮತದಾರರ ಪಟ್ಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಂಪುಟಕ್ಕೆ ನಂಬಿಕೆ ಇದೆ. ಆದರೆ ರಾಹುಲ್ ಗಾಂಧಿ ಅವರಿಗೆ ಮಾತ್ರ ಇಲ್ಲ, ಅಲ್ಲವೇ? ಎಂಬ ಪ್ರಶ್ನೆಗಳನ್ನು ಅಶೋಕ್‌ ಮುಂದಿಟ್ಟಿದ್ದಾರೆ.

135 ಸೀಟು ಗೆದ್ದಾಗ ಸಂಭ್ರಮಿಸಿ ಬೀಗುವುದು, ಸೋತು ಸುಣ್ಣವಾದಾಗ ಹತಾಶೆಯಲ್ಲಿ ಚುನಾವಣಾ ಆಯೋಗದ ಮೇಲೆ, ಚುನಾವಣಾ ಪ್ರಕ್ರಿಯೆ ವಿಪಕ್ಷಗಳ ಮೇಲೆ ಸಂದೇಹ ಪಟ್ಟು ಅಪಪ್ರಚಾರ ಮಾಡುವುದು, ಈ ನಾಟಕವನ್ನು ನಂಬುವಷ್ಟು ದಡ್ಡರಲ್ಲ ಕನ್ನಡಿಗರು. ಇನ್ನಾದರೂ ಜನಾದೇಶವನ್ನ ಒಪ್ಪಿಕೊಂಡು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *