Thursday, January 30, 2025
Menu

ಶಿಕ್ಷಣ ಪ್ರೇಮಿ ಸಾವಮ್ಮ ಹೊಂಗಲ ಇನ್ನಿಲ್ಲ

ಧಾರವಾಡ ತಾಲೂಕಿನ ಜೀರಿಗವಾಡ ಗ್ರಾಮದ ಶಿಕ್ಷಣ ಪ್ರೇಮಿ ಸಾವಮ್ಮ ಈರಪ್ಪ ಹೊಂಗಲ (92) ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

ಶಿಕ್ಷಣ ಪ್ರೇಮಿ ಸಾವಮ್ಮ ಈರಪ್ಪ ಹೊಂಗಲ ತಮ್ಮೂರಿನ ಶಾಲೆಯ ಶಿಕ್ಷಕರಿಗೆ ಸತತ 42 ವರ್ಷಗಳವರೆಗೆ ತಮ್ಮ ಜೀವಿತಾವಧಿಯವರೆಗೂ ಅನ್ನದಾನದ ಮೂಲಕ ತಮ್ಮ ಗ್ರಾಮದ ಮಕ್ಕಳ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಿದ್ದರು.

ಇಬ್ಬರು ಪುತ್ರರನ್ನು ಹೊಂದಿದ್ದ ಇವರಿಗೆ ಈಗ ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ. ಅತ್ಯಂತ ಸರಳ, ಸಜ್ಜನ, ಸಾತ್ವಿಕರಾಗಿದ್ದ ಇವರು, ತಮ್ಮ ಊರಿನ ಮಕ್ಕಳ ಶಿಕ್ಷಣ ಕಲಿಕೆಗೆ ಯಾವುದೇ ತೊಂದರೆ ಆಗಬಾರದೆಂದು ತಮ್ಮೂರಿನ ಶಾಲೆಯ ಶಿಕ್ಷಕರಿಗೆ ನಿರಂತರ ಅನ್ನದಾಸೋಹ ಮಾಡುತ್ತಾ ಬಂದಿರುವ ಈ ಅಜ್ಜಿ ಎಲ್ಲರಿಗೂ ಮಾದರಿಯಾಗಿದ್ದರು.

ಕೇವಲ ಶಿಕ್ಷಕರಿಗೆ ಅಷ್ಟೇ ಅಲ್ಲದೇ ಮನೆಗೆ ಬರುವ ಪ್ರತಿಯೊಬ್ಬರಿಗೂ ಆದರಿಸುವ ಮೂಲಕ “ಅತಿಥಿ ದೇವೋಭವ” ಎಂಬ ಭವ್ಯ ಭಾರತೀಯ ಸಂಸ್ಕೃತಿಯನ್ನು ಈ ಅಜ್ಜಿ ಸಾಕಾರಗೊಳಿಸಿದ್ದರು. ಶಿಕ್ಷಣ ಮತ್ತು ಅನ್ನ ದಾಸೋಹ ಪ್ರೇಮಿ ಸಾವಮ್ಮ ಹೊಂಗಲ್ ಅಗಲಿಕೆಗೆ ಇಡೀ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಕಣ್ಣೇರು ಹಾಕಿದ್ದಾರೆ.

Related Posts

Leave a Reply

Your email address will not be published. Required fields are marked *