ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಬುಧವಾರ ಸಂಜೆ ಸರಣಿ ಭೂಕಂಪನಗಳು ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಗರಿಷ್ಠ 5.2 ತೀವ್ರತೆಯ ಕಂಪನ ಸಂಭವಿಸಿದೆ.
ಚೌರಾಚಂದಾಪುರ್ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 1.54ರ ಸುಮಾರಿಗೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ ಗರಿಷ್ಠ 5.2ರ ತೀವ್ರತೆ ದಾಖಲಾಗಿದೆ.
ಎರಡನೇ ಅತೀ ದೊಡ್ಡ ಭೂಕಂಪನ ಮಧ್ಯಾಹ್ನ 2.26ಕ್ಕೆ ಸಂಭವಿಸಿದ್ದು, 2.5ರ ತೀವ್ರತೆ ದಾಖಲಾಗಿದೆ. ಮೂರನೇ ಬಾರಿ ಇದೇ ಚಂದಾಪುರ್ ನಲ್ಲಿ ಮಧ್ಯಾಹ್ನ 10.29ಕ್ಕೆ ಸಂಭವಿಸಿದ ಭೂಕಂಪನ 3.9ರ ತೀವ್ರತೆ ದಾಖಲಾಗಿತ್ತು.
ಭೂಕಂಪನದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.