ಕಳೆದ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನದಿಂದ ತತ್ತರಿಸಿರುವ ಮ್ಯಾನ್ಮರ್ ನಲ್ಲಿ ಸಾವಿನ ಸಂಖ್ಯೆ 3000 ಮೀರಿದ್ದು, ಬುಧವಾರ ಮತ್ತೆ 5.6 ತೀವ್ರತೆಯ ಭೂಕಂಪನ ಸಂಭವಿಸಿದೆ.
ಶುಕ್ರವಾರ ಸಂಭವಿಸಿದ 7.7 ಮತ್ತು 6.8 ತೀವ್ರತೆಯ ಭೂಕಂಪನದಿಂದ ಮ್ಯಾನ್ಮರ್ ಮತ್ತು ಬ್ಯಾಂಕಾಕ್ ತತ್ತರಿಸಿತ್ತು. ದುರಂತ ಸಂಭವಿಸಿದ ವಾರದಲ್ಲಿ ಸಾವಿನ ಸಂಖ್ಯೆ 3000 ದಾಟಿದೆ. ಗಾಯಗೊಂಡವರ ಸಂಖ್ಯೆ 4700ಕ್ಕೆ ಏರಿಕೆಯಾಗಿದೆ.
ಭೂಕಂಪದಿಂದ 30 ಲಕ್ಷ ಜನರು ಮನೆ-ಮಠ ಕಳೆದುಕೊಂಡಿದ್ದರೆ, 20 ಲಕ್ಷಕ್ಕೂ ಅಧಿಕ ಜನರಿಗೆ ಚಿಕಿತ್ಸೆಯ ನೆರವು ಬೇಕಾಗಿದೆ. ಮ್ಯಾನ್ಮರ್ ನಲ್ಲಿ ನಾಗರಿಕ ದಂಗೆ ನಡೆಯುತ್ತಿದ್ದು, ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ. ಸಂತ್ರಸ್ತರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.