ದೇಶಾದ್ಯಂತ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳನ್ನು ನೀಡಲು ಆರಂಭಿಸಲಾಗಿದೆ. ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿಗೊಂಡಿದ್ದ ಈ ಯೋಜನೆ ಈಗ ದೇಶದ 13 ಪ್ರಮುಖ ನಗರಗಳಲ್ಲಿ ಲಭ್ಯವಿದೆ. ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮಡಿ ಜಾರಿಗೊಳಿಸಲಾದ ಈ ವ್ಯವಸ್ಥೆಯು ಭದ್ರತೆಯನ್ನು ದ್ವಿಗುಣಗೊಳಿಸುವು ದರ ಜೊತೆಗೆ ಅಂತರರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.
ಹೊಸ ಇ-ಪಾಸ್‌ಪೋರ್ಟ್‌ನಲ್ಲಿ ಒಂದು ಎಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗಿದ್ದು, ಬಯೋಮೆಟ್ರಿಕ್ (ಬೆರಳಚ್ಚು, ಕಣ್ಣಿನ ಸ್ಕ್ಯಾನ್) ಮತ್ತು ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನವನ್ನು ಬಳಸಿರುವ ಈ ಚಿಪ್, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್ ದೃಢೀಕರಣವನ್ನು ತ್ವರಿತವಾಗಿ ಮಾಡುತ್ತದೆ. ಇ-ಪಾಸ್‌ಪೋರ್ಟ್‌ನ ಮುಂಭಾಗದ ಕವರ್‌ನ ಕೆಳಗಿರುವ ಚಿನ್ನದ ಬಣ್ಣದ ಚಿಹ್ನೆ ಇದನ್ನು ಗುರುತಿಸುತ್ತದೆ.
ಇ-ಪಾಸ್‌ಪೋರ್ಟ್ ಪಾಸ್‌ಪೋರ್ಟ್‌ನ ನಕಲು ಅಥವಾ ವಂಚನೆಯ ಸಾಧ್ಯತೆಯನ್ನು ಗಣನೀಯವಾಗಿ ತಗ್ಗಿಸುವುದು, ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆ ಯನ್ನು ತ್ವರಿತಗೊಳಿಸಿ ಪ್ರಯಾಣಿಕರ ಸಮಯ ಉಳಿತಾಯವಾಗುತ್ತದೆ. ಚಿಪ್‌ನಲ್ಲಿರುವ ಎಲ್ಲ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡಲಾಗಿದ್ದು, ಡೇಟಾ ಸುರಕ್ಷತೆ ಯನ್ನು ಖಾತ್ರಿಪಡಿಸುತ್ತದೆ. ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನಿಗದಿಪಡಿಸಿದ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿವೆ, ಎಲ್ಲ ದೇಶ ಗಳಲ್ಲಿ ಇವು ಸುಲಭವಾಗಿ ಸ್ವೀಕಾರಾರ್ಹವಾಗಿವೆ.
ಚೆನ್ನೈ, ದೆಹಲಿ, ರಾಂಚಿ, ಗೋವಾ, ಹೈದರಾಬಾದ್, ಜೈಪುರ, ಜಮ್ಮು, ಅಮೃತಸರ, ಭುವನೇಶ್ವರ್, ನಾಗಪುರ, ರಾಯ್‌ಪುರ, ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ವಾಸಿಸುವವರು ಹೊಸ ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಅವರಿಗೆ ಇ-ಪಾಸ್‌ಪೋರ್ಟ್ ನೀಡಲಾಗುತ್ತದೆ. ಸಾಂಪ್ರದಾಯಿಕ ಪಾಸ್‌ಪೋರ್ಟ್ ಹೊಂದಿರುವವರು ಹಳೆಯ ಪಾಸ್‌ಪೋರ್ಟ್‌ನ್ನು ಇ-ಪಾಸ್‌ಪೋರ್ಟ್‌ಗೆ ಬದಲಾಯಿಸುವುದು ಕಡ್ಡಾಯವಲ್ಲ. ಹಳೆಯ ಪಾಸ್‌ಪೋರ್ಟ್‌ಗಳು ಮಾನ್ಯತೆಯ ಅವಧಿ ಯವರೆಗೆ ಚಾಲ್ತಿಯಲ್ಲಿರುತ್ತವೆ.
ಇ-ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು, ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ಗೆ (www.passportindia.gov.in) ಭೇಟಿ ನೀಡಿ ಅಥವಾ ಹತ್ತಿರದ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ತೆರಳಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ, ಅಪಾಯಿಂಟ್‌ಮೆಂಟ್ ಬುಕ್ ಮಾಡಿಕೊಳ್ಳಿ. ನಿಗದಿತ ದಿನಾಂಕದಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಿ.