ಹಾವೇರಿಯ ಸವಣೂರು ತಾಲೂಕಿನ ಕಳಲಗೊಂಡ ಗ್ರಾಮದ ಬಳಿ ಶಾಲಾ ಬಸ್ ಚಾಲನೆ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಆದರೆ ಅಂಥ ಸ್ಥಿತಿಯಲ್ಲೂ ಸಮಯಪ್ರಜ್ಞೆ ಮೆರೆದ ಚಾಲಕ ಮಕ್ಕಳನ್ನು ಅಪಾಯದಿಂದ ರಕ್ಷಿಸಿದ್ದಾರೆ.
ಪಕ್ಕಿರೇಶ ಮಲ್ಲೇಶಣ್ಣನವರ್ (25) ಮೃತ ಚಾಲಕ. ಖಾಸಗಿ ಶಾಲೆಯ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪಕ್ಕಿರೇಶ ಸಂಜೆ ಶಾಲೆಯಿಂದ ವಾಪಸ್ ಮಕ್ಕಳನ್ನು ಮನೆಗೆ ಡ್ರಾಪ್ ಮಾಡುತ್ತಿರುವಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ರಸ್ತೆಬದಿಯಲ್ಲಿ ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಮಕ್ಕಳು ಕೂಗಾಡಿ ಸ್ಥಳೀಯರನ್ನು ಕರೆದಿದ್ದಾರೆ.
ಸ್ಥಳೀಯರು ಸೇರಿ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹೃದಯಾಘಾತದಿಂದ ಅಸು ನೀಗಿದ್ದಾರೆ. ಅದೃಷ್ಟವಶಾತ್ ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.