ಕಲ್ಲು ಗಣಿಗಾರಿಕೆಯ ಕ್ವಾರಿಯಲ್ಲಿ ಪ್ರಪಾತಕ್ಕೆ ಟಿಪ್ಪರ್ ಬಿದ್ದು, ಚಾಲಕ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ಶುಕ್ರವಾರ ಸಂಭವಿಸಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಜಟಕ ಗೇಟ್ ಬಳಿ ರವಿ ಹಾಗೂ ಕಾಂತ ಎಂಬುವವರು ಸೇರಿ ನಡೆಸುತ್ತಿದ್ದ ಕ್ವಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಗಣಿಗಾರಿಕೆಯಿಂದ ಪ್ರಪಾತದಂತೆ ದೊಡ್ಡ ಹಳ್ಳ ಸೃಷ್ಟಿಯಾಗಿದ್ದು, ಗುರುವಾರ ತಡರಾತ್ರಿ ಟಿಪ್ಪರ್ ಚಲಿಸುವ ವೇಳೆ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದೆ. ಪ್ರಪಾತದಲ್ಲಿ ನೀರು ಇದ್ದ ಕಾರಣ ಟಿಪ್ಪರ್ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಚಾಲಕ ಲಕ್ಷ್ಮಣ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಬಳಿಕ ಅಗ್ನಿಶಾಮದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ಲಕ್ಷ್ಮಣ್ ಮೃತ ದೇಹವನ್ನು ಮೇಲೆತ್ತಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.


