ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ರಾವ್‌ಗೆ ಜಾಮೀನು ಮಂಜೂರು ಮಾಡದಂತೆ ಕೋರ್ಟ್‌ಗೆ ಡಿಆರ್‌ಐ ಆಕ್ಷೇಪಣೆ ಸಲ್ಲಿಸಿದೆ. ಆಕೆ ದುಬೈ ರೆಸಿಡೆಂಟ್ ವೀಸಾ ಹೊಂದಿರುವುದರಿಂದ ಜಾಮೀನು ಮಂಜೂರು ಮಾಡಿದರೆ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ರನ್ಯಾ ರಾವ್ ಬಳಿ ದುಬೈ ರೆಸಿಡೆಂಟ್ ವೀಸಾ ಇದ್ದು, 83 ಲಕ್ಷ ರೂ. ನೀಡಿ 2 ವರ್ಷಗಳ ರೆಸಿಡೆಂಟ್ ವೀಸಾ ಪಡೆದಿದ್ದಾರೆ. ಪ್ರಕರಣದಲ್ಲಿ ರನ್ಯಾ ರಾವ್‌ಗೆ ಜಾಮೀನು ಮಂಜೂರು ಮಾಡಿದರೆ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ಕೋರ್ಟ್‌ಗೆ ಡಿಆರ್‌ಐ ಮನವಿ ಮಾಡಿದೆ.
ರನ್ಯಾ ರಾವ್ ಬಳಿ ದುಬೈ ರೆಸಿಡೆಂಟ್ ವೀಸಾ ಇದೆ, ಆಕೆ ಎರಡನೇ ಪಾಸ್‌ಪೋರ್ಟ್‌ನಲ್ಲಿ 6 ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. 2015 ಜ. 25ರಂದು ಮೊದಲ ಪಾಸ್‌ಪೋರ್ಟ್ ಹೊಂದಿದ್ದರು. ಬಳಿಕ 2025 ಜ. 25ರಲ್ಲಿ ರನ್ಯಾರಾವ್ ಪಾಸ್‌ಪೋರ್ಟ್ ರಿನಿವಲ್ ಮಾಡಿಸಿದ್ದರು. ಫೆ.25ರಂದು ಅಮೆರಿಕದಿಂದ ಬೆಂಗಳೂರಿಗೆ ಬಂದಿರುವ ಮಾಹಿತಿಯನ್ನು ತನಿಖಾ ಸಂಸ್ಥೆ ಕಲೆ ಹಾಕಿದೆ.