Sunday, September 28, 2025
Menu

DRDO ನೇಮಕಾತಿ 2025: 195 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ಹೈದರಾಬಾದ್‌ನ ಸಂಶೋಧನಾ ಘಟಕದಲ್ಲಿ ಅಪ್ರೆಂಟಿಸ್ ತರಬೇತಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಾಳೆ, ಸೆಪ್ಟೆಂಬರ್ 27, 2025 ರಿಂದ ಆರಂಭವಾಗಿ ಅಕ್ಟೋಬರ್ 28, 2025 ರವರೆಗೆ ಮುಂದುವರಿಯಲಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ drdo.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಮೂಲಕ 195 ಅಪ್ರೆಂಟಿಸ್ ಹುದ್ದೆಗಳು ಲಭ್ಯವಿದ್ದು,40 ಗ್ರಾಜುಯೇಟ್ ಅಪ್ರೆಂಟಿಸ್, 20 ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್  ಹಾಗು 135 ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಅರ್ಹತೆ
•ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ – ಮೆಕ್ಯಾನಿಕಲ್ ಅಥವಾ ಕೆಮಿಕಲ್ ಸೇರಿದಂತೆ ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಅಗತ್ಯ.
•ಟೆಕ್ನಿಷಿಯನ್ ಅಪ್ರೆಂಟಿಸ್‌ಗಳಿಗೆ – ಸಂಬಂಧಿತ ಶಾಖೆಯಲ್ಲಿ ಡಿಪ್ಲೊಮಾ ಇದ್ದೇ ಇರಬೇಕು.
•ಐಟಿಐ ಟ್ರೇಡ್ ಅಪ್ರೆಂಟಿಸ್‌ಗಳಿಗೆ – ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಡೀಸೆಲ್ ಮೆಕ್ಯಾನಿಕ್, ಡ್ರಾಫ್ಟ್ಸ್‌ಮನ್ (ಮೆಕ್ಯಾನಿಕಲ್), ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, COPA ಅಥವಾ ಲೈಬ್ರರಿ ಅಸಿಸ್ಟೆಂಟ್ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಇರಬೇಕು.
ವಯೋಮಿತಿ
ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು. ಮೀಸಲು ವಿಭಾಗಗಳಿಗೆ ಸರ್ಕಾರದ ನಿಯಮಾನುಸಾರ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ. ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 1, 2025 ರಂದು ಪರಿಗಣಿಸಲಾಗುತ್ತದೆ.
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದವರನ್ನು ಅವರ ಶೈಕ್ಷಣಿಕ ಅರ್ಹತೆ ಮತ್ತು ತಾಂತ್ರಿಕ ಕೌಶಲ್ಯಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ಆಯ್ಕೆಯಾದವರಿಗೆ ಕೆಳಗಿನಂತೆ ಸ್ಟೈಪೆಂಡ್ ನೀಡಲಾಗುತ್ತದೆ:
•ಗ್ರಾಜುಯೇಟ್ ಅಪ್ರೆಂಟಿಸ್ – ತಿಂಗಳಿಗೆ ರೂ9,000
•ಡಿಪ್ಲೊಮಾ ಅಪ್ರೆಂಟಿಸ್ – ತಿಂಗಳಿಗೆ ರೂ8,000
ಹೆಚ್ಚಿನ ಮಾಹಿತಿಗಾಗಿ DRDO ಅಧಿಸೂಚನೆಯನ್ನು ಪರಿಶೀಲಿಸಲು ಸಲಹೆ ನೀಡಲಾಗಿದೆ.

Related Posts

Leave a Reply

Your email address will not be published. Required fields are marked *