Menu

ಇರಾನ್‌ ಮೇಲಿನ ದಾಳಿಗಳಿಗೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೊಣೆ ಎಂದ ಟ್ರಂಪ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್ ವಿರುದ್ಧ ನಡೆದ ಅಮೆರಿಕ-ಇಸ್ರೇಲ್ ದಾಳಿಗಳಿಗೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೊಣೆ ಎಂದು ಹೇಳುವ ಮೂಲಕ ಇಷ್ಟೆಲ್ಲ ಅನಾಹುತಗಳಿಗೆ ಪೀಟ್‌ ಕಾರಣವೆಂದು ಬೆಟ್ಟು ಮಾಡಿದ್ದಾರೆ. ಅಮೆರಿಕ ಟೆನ್ನೆಸ್ಸೀ ರಾಜ್ಯದ ಮೆಂಫಿಸ್‌ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಈ ಹೇಳಿಕೆ ನೀಡಿದ್ದು, ಇರಾನ್‌ ಮೇಲಿನ ದಾಳಿಗಳನ್ನು ಮೊದಲು ಪ್ರಸ್ತಾಪಿಸಿದ್ದೇ ಪೀಟ್‌ ಹೆಗೆತ್ಸ್‌ ಎಂದು ಟ್ರಂಪ್‌ ಹೇಳಿದ್ದಾರೆ.

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾನು ಪೀಟ್‌ ಹೇಗೆತ್ಸ್‌, ಜನರಲ್ ಕೇನ್‌ ಸೇರಿದಂತೆ ಹಲವರಿಗೆ ಕರೆ ಮಾಡಿ ಮಧ್ಯಪ್ರಾಚ್ಯದಲ್ಲಿ ಸಮಸ್ಯೆಯಿದೆ, ಇರಾನ್‌ 47 ವರ್ಷಗಳಿಂದ ಭಯೋತ್ಪಾದನೆ ಪ್ರಾಯೋಜಕರಾಗಿದ್ದು, ಪರಮಾಣು ಅಸ್ತ್ರವನ್ನು ಹೊಂದುವಲ್ಲಿ ಕೆಲಸ ಮಾಡುತ್ತಿದ್ದಾರೆ. ಅದನ್ನು ತಡೆಯಬೇಕು ಎಂದಾಗ ಎಲ್ಲರಿಗಿಂತ ಮೊದಲು “ಬಹುಶಃ ಪೀಟ್, ನೀವು ಮೊದಲು ಮಾತನಾಡಿದಿರಿ ಎಂದು ಭಾವಿಸುತ್ತೇನೆ, ನೀವು ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಲು ಸಾಧ್ಯವಿಲ್ಲ, ಸೇನಾ ಕಾರ್ಯಾಚರಣೆ ಮಾಡೋಣ ಎಂದು ಹೇಳಿದ್ದೀರಿ ಎಂದು ಪೀಟ್‌ ಹೆಗೆತ್ಸ್‌ ನತ್ತ ನೋಡುತ್ತ ಹೇಳಿದ್ದಾರೆ.

ಈ ನಡುವೆ ಅಮೆರಿಕ ಅಧ್ಯಕ್ಷರು ಘೋಷಿಸಿದ ಕದನ ವಿರಾಮವನ್ನು ಇರಾನ್‌ ತಿರಸ್ಕರಿಸಿದ್ದು, ಯಾವುದೇ ಕದನ ವಿರಾಮ ಒಪ್ಪಂದ ಮಾತುಕತೆ ನಡೆದಿಲ್ಲ. ಮೊಜ್ತಬಾ ಖಮೇನಿ ನೇತೃತ್ವದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧದ ಹೋರಾಟ ಮುಂದುವರಿಯುತ್ತಿದೆ ಎಂದು ಹೇಳಿದೆ. ಇರಾನ್‌ ಮಾಧ್ಯಮಗಳು ಟ್ರಂಪ್‌ ಹೇಡಿತನದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡುತ್ತಿವೆ.

Related Posts

Leave a Reply

Your email address will not be published. Required fields are marked *