ಬೆಂಗಳೂರಿನಲ್ಲಿ ವೈದ್ಯೆಯಾಗಿದ್ದ ಪತ್ನಿ ಕೃತಿಕಾ ರೆಡ್ಡಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ವೈದ್ಯ ಮಹೇಂದ್ರ ರೆಡ್ಡಿ ಪೊಲೀಸ್ ವಿಚಾರಣೆಯಲ್ಲಿ ತಾನು ಆಕೆಗೆ ಅನಸ್ತೇಷಿಯಾ ನೀಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ವಿಷಯ ಮುಚ್ಚಿಟ್ಟು ರೋಗಿಷ್ಟೆಯೊಂದಿಗೆ ನನ್ನ ಮದುವೆ ಮಾಡಿರುವ ಆ ಪೋಷಕರ ವಿರುದ್ಧ ಸೇಡು ತೀರಿಸಲು ಹೀಗೆ ಮಾಡಿದ್ದೇನೆ, ಅವರು ನಾನು ಜೀವನದಲ್ಲಿ ಕಂಡಿದ್ದ ಕನಸನ್ನು ನುಚ್ಚುನೂರಾಗಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಇಲ್ಲಿಯವರೆಗೆ ಅನಸ್ತೇಷಿಯಾ ಕೊಟ್ಟಿದ್ದು ತಾನಲ್ಲ ಎಂಬ ಹೇಳಿಕೆಗೆ ಅಂಟಿಕೊಂಡಿದ್ದ ಆರೋಪಿ ಪೊಲೀಸರ ತೀವ್ರಗೊಂಡ ಬಳಿಕ ನಿಜ ಒಪ್ಪಿಕೊಂಡಿದ್ದಾನೆ.
ಕೃತ್ತಿಕಾಳ ಪೋಷಕರು ತನಗೆ ವಂಚನೆ ಮಾಡಿದ್ದಾರೆ, ತಾನು ಒಂದೊಳ್ಳೆ ಜೀವನದ ಕನಸು ಕಂಡಿದ್ದೆ, ಆದ್ರೆ ಒಬ್ಬ ರೋಗಿಷ್ಟೆಯನ್ನು ನನಗೆ ಮದುವೆ ಮಾಡಿಸಿದ್ದಾರೆ. ಅವಳು ಏನೇ ತಿಂದರೂ ಕುಡಿದರೂ ವಾಂತಿ ಮಾಡ್ತಾಳೆ, ಪಾರ್ಟಿ ಸಂಧರ್ಭದಲ್ಲಿ ಕೂಡ ಇದೇ ರೀತಿ ಮಾಡಿ ಮುಜುಗರ ಮಾಡ್ತಿದ್ಲು , ಸ್ನೇಹಿತರು ಕೂಡ ಆಗಾಗ ಮೂದಲಿಸುತ್ತಿದ್ರು. ನೀ ಚೆನ್ನಾಗಿದ್ಯ ನಿಂಗೆ ಯಾಕೆ ರೋಗ ಬಂದಿರೋ ಹೆಂಡತಿ ಅಂತ, ತಮಾಷೆಗೆ ಮಾತನ್ನಾಡಿದ್ರೂ ತನಗೆ ಇದ್ರಿಂದ ಪತ್ನಿ ಬಗ್ಗೆ ಬೇಸರ ಅನಿಸ್ತಿತ್ತು, ಹೀಗಾಗಿ ದೂರ ಆಗಲು ನಿರ್ಧರಿಸಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
ಪತ್ನಿಯಿಂದ ದೂರ ಆಗಬೇಕು ಹಾಗೂ ತನಗೆ ಸಿಗಬೇಕಾದ ಪ್ರೀತಿಗಾಗಿ ತಾನು ಬೇರೆಯವರನ್ನು ಪ್ರೀತಿ ಮಾಡಿದ್ದೆ ಎಂದು ಒಪ್ಪಿಕೊಂಡ ಆರೋಪಿ, ಕೃತಿಕಾ ಸತ್ತರೆ ಯುವತಿಯ ಜೊತೆ ಇರಬಹುದು ಎಂಬ ಕಾರಣಕ್ಕೆ ಹತ್ಯೆಗೆ ಪ್ಲಾನ್ ರೂಪಿಸಿದ್ದೆ ಎಂದು ಹೇಳಿದ್ದಾನೆ.
2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ಮದುವೆಯಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿಯವರು ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಮದುವೆಯ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ವಿಷಯ ಪತಿಗೆ ಗೊತ್ತಾಗಿದೆ. ಪ್ರತಿದಿನ ವಾಂತಿ, ಇತರ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲ್ಲಲು ಮಹೇಂದ್ರರೆಡ್ಡಿ ಸಂಚು ರೂಪಿಸಿದ್ದ. ಹುಷಾರಿಲ್ಲದೆ ತವರುಮನೆಯಲ್ಲಿ ಕೃತಿಕಾರೆಡ್ಡಿ ಮಲಗಿದ್ದಾಗ ಅಲ್ಲಿಗೆ ಬಂದಿದ್ದ ಮಹೇಂದ್ರ ರೆಡ್ಡಿ ಆಕೆಗೆ ಇಂಜೆಕ್ಷನ್ ಮೂಲಕ ಅನಷ್ತೇಷಿಯಾ ನೀಡಿದ್ದ. ಬಳಿಕ ಜ್ಞಾನ ತಪ್ಪಿದ್ದ ಕೃತಿಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು.