ಇತ್ತೀಚೆಗೆ ಗಂಡ ಮಹೇಂದ್ರ ರೆಡ್ಡಿಯಿಂದಲೇ ಕೊಲೆಯಾಗಿರುವ ವೈದ್ಯೆ ಕೃತಿಕಾ ರೆಡ್ಡಿ ಪ್ರಕರಣದ ವಿಚಾರಣೆಯಲ್ಲಿ ಮಾರತ್ತಹಳ್ಳಿ ಪೊಲೀಸರು ಮಹತ್ವದ ವಿಚಾರವನ್ನು ಬಯಲಿಗೆಳೆದಿದ್ದಾರೆ. ಆರೋಪಿಗೆ ಹಲವು ಯುವತಿಯರ ಜೊತೆ ಸಂಪರ್ಕ ಇರುವುದು ಪತ್ತೆಯಾಗಿದೆ.
2023 ರಲ್ಲಿ ಮುಂಬೈ ಮೂಲದ ಯುವತಿಯ ಹಿಂದೆ ಬಿದ್ದದ್ದ ಮಹೇಂದ್ರ ರೆಡ್ಡಿ, ಮದುವೆಯಾಗುವುದಾಗಿ ಆಕೆಯ ಮನೆಗೂ ಹೋಗಿದ್ದ. ನಂತರ ಮನೆಗೆ ವಾಪಸಾಗಿ ತಂದೆ ಮೂಲಕ ಆ ಯುವತಿಗೆ ಕರೆ ಮಾಡಿಸಿದ್ದ. ಮಹೇಂದ್ರ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಆತನ ತಂದೆ ಯುವತಿಗೆ ತಿಳಿಸಿದ್ದರು. ಇದನ್ನು ನಂಬಿ ಯುವತಿ ಸುಮ್ಮನಾಗಿದ್ದಳು.
ಕೃತಿಕಾಳನ್ನು ಕೊಲೆ ಮಾಡಿದ ಬಳಿಕ ಆತ ಮತ್ತೆ ಮುಂಬೈ ಯುವತಿಯನ್ನು ಸಂಪರ್ಕ ಮಾಡಿದ್ದ ಮಹೇಂದ್ರ ರೆಡ್ಡಿ, ನನ್ನ ಜಾತಕದಲ್ಲಿ ಒಂದು ಸಮಸ್ಯೆ ಇತ್ತು. ನಾನು ಮೊದಲು ನೋಡಿದ ಹುಡುಗಿ ನೀನು, ನಿನ್ನನ್ನ ಮದುವೆಯಾದರೆ ನೀನು ಸಾಯುವು ದಾಗಿ ಜಾತಕದಲ್ಲಿ ಇತ್ತು. ಅದಕ್ಕಾಗಿ ಅವತ್ತು ನಾನು ಸುಳ್ಳು ಹೇಳಿದ್ದೆ, ನಾನು ಮತ್ತೊಬ್ಬಳನ್ನ ಮದುವೆಯಾಗಿದ್ದೆ, ಈಗ ಆಕೆಅನಾರೋಗ್ಯದಿಂದ ಸತ್ತು ಹೋಗಿದ್ದಾಳೆ ಈಗ ನಾನು ನೀನು ಮದುವೆಯಾಗಬಹುದು ಎಂದು ಯುವತಿಗೆ ತಿಳಿಸಿದ್ದ. ಕಳೆದ ಸಪ್ಟೆಂಬರ್ ನಲ್ಲಿ ಕರೆ ಮಾಡಿ ಮಾತನಾಡಿದ್ದ ಯುವತಿ ಜೊತೆ ಮಾತನಾಡಿದ್ದ ಎಂಬುದು ತಿಳಿದು ಬಂದಿದೆ.
ಆರೋಪಿ ಮಹೇಂದ್ರ ರೆಡ್ಡಿಯ ಪೋನ್ ಲ್ಯಾಪ್‌ಟಾಪ್ ಪರಿಶೀಲನೆ ನಡೆಸಿ ಎಫ್ಎಸ್ಎಲ್ ಗೆ ರವಾನಿಸಿದ್ದು, ಅದರಲ್ಲಿದ್ದ ಚಾಟಿಂಗ್‌ನಿಂದ ಇವೆಲ್ಲ ಹೊರ ಬಿದ್ದಿದೆ. ಆತನ ವಾಟ್ಸಪ್ ಅನ್ನು ಸ್ನೇಹಿತೆ ಬ್ಲಾಕ್ ಮಾಡಿದ್ದಳು, ಹೀಗಾಗಿ ಪೋನ್ ಪೇಯಲ್ಲಿ ಆರೋಪಿ ಚಾಟ್ ಮಾಡಿದ್ದ. ವೈಯಕ್ತಿಕ ವಿಚಾರಗಳ ಬಗ್ಗೆ ಚಾಟ್ ಮಾಡಿರುವುದು ಪತ್ತೆಯಾಗಿದೆ.
ಪೋನ್ ಪೇ ನಲ್ಲಿ ಚಾಟ್ ಮಾಡಿದರೆ ಡಿಲಿಟ್ ಮಾಡಲು ಆಗದ ಕಾರಣ ಚಾಟಿಂಗ್ ಹಿಸ್ಟರಿ ಪೊಲೀಸರಿಗೆ ಸಿಕ್ಕಿದೆ. ಕೊಲೆಯಾದ ಕೃತಿಕಾ ಮೊಬೈಲ್ ಫೋನ್ ಪರಿಶೀಲನೆ ಪ್ರಯತ್ನ ನಡೆದಿದ್ದು, ಲಾಕ್ ಒಪನ್ ಆಗದೆ ತೊಂದರೆಯಾಗಿದೆ. ಐಫೋನ್ ಹಾಗೂ ಲ್ಯಾಪ್‌ಟಾಪ್ ಎರಡೂ ಲಾಕ್ ಆಗಿದೆ. ಡೇಟಾ ಹೊರತೆಗೆಯಲು ಪೊಲೀಸರು ಎಫ್ಎಸ್ಎಲ್ ಮೊರೆ ಹೋಗಿದ್ದಾರೆ.


