ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯಗಳಲ್ಲಿ ಒಂದಾಗಿರುವ ಐಪಿಎಲ್ ನಲ್ಲಿ ಆಟಗಾರರಿಂದ ಹಿಡಿದು ಪ್ರತಿಯೊಬ್ಬರು ಕೋಟಿಗಟ್ಟಲೆ ಹಣ ಮಾಡುತ್ತಿದ್ದಾರೆ. ಆದರೆ ಅಂಪೈರ್ ಗಳ ಸಂಭಾವನೆ ಎಷ್ಟು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಐಪಿಎಲ್ 2025ನಲ್ಲಿ ಮೈದಾನದ ಅಂಪೈರ್ ಗಳು ಒಂದು ಪಂದ್ಯಕ್ಕೆ 3 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ. ನಾಲ್ಕನೇ ಅಂಪೈರ್ ಪ್ರತಿ ಪಂದ್ಯಕ್ಕೆ 2 ಲಕ್ಷ ರೂ. ಗಳಿಸುತ್ತಿದ್ದಾರೆ.
ಇಂಪ್ಯಾಕ್ಟ್ ಆಟಗಾರನಾಗಿ ಮೈದಾನಕ್ಕೆ ಇಳಿಯುವ ಆಟಗಾರ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ಗಳಿಸಲಿದ್ದಾರೆ. ಇದು ಫ್ರಾಂಚೈಸಿಗಳು ನೀಡುವ ನಿಗದಿತ ಶುಲ್ಕ ಅಲ್ಲದೇ ಹೆಚ್ಚುವರಿಯಾಗಿ ಐಪಿಎಲ್ ನಿಂದ ಪಡೆಯಲಿದ್ದಾರೆ.