ದಾವಣಗೆರೆ : ಈ ಅವಧಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನೊಣವಿನ ಕೆರೆಯ ಶ್ರೀ ಶಿವಯೋಗಿಸ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ 2028 ರಲ್ಲೂ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂಬ ಹೇಳಿಕೆ ಬೆನ್ನಲ್ಲೇ ನೊಣವಿನ ಕೆರೆಯ ಶ್ರೀ ಶಿವಯೋಗಿಸ್ವರ ಸ್ವಾಮೀಜಿ ಈ ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ.
ಈ ಅವಧಿಯಲ್ಲೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಕಾಡುಸಿದ್ದೇಶ್ವರ ಮಠದ ನೊಣವಿನಕೆರೆಯ ಶಿವಯೋಗಿಶ್ವರ ಶ್ರೀಗಳು ಭವಿಷ್ಯ ನುಡಿದಿದ್ದು, ಶ್ರೀಮಠ ಜನರ ಸಂಕಲ್ಪದ ಮೇರೆಗೆ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸುತ್ತಾರೆ ಎಂದು ಅವರು ಹೇಳಿದರು.
ಡಿಕೆ ಶಿವಕುಮಾರ್ ಯಾವಾಗಲೂ ಮಠಕ್ಕೆ ಬರುತ್ತಾರೆ. ಆದರೆ ರಾಜಕೀಯವಾಗಿ ಬರಲ್ಲ ಜನಸೇವೆ ಮಾಡಲು ಅವಕಾಶ ಸಿಗಲೆಂದು ಆಶೀರ್ವಾದ ಮಾಡುತ್ತೇವೆ ಎಂದು ದಾವಣಗೆರೆ ಜಿಲ್ಲೆಯ ಸೊಕ್ಕೆ ಗ್ರಾಮದಲ್ಲಿ ಶಿವಯೋಗಿಶ್ವರ ಶ್ರೀಗಳು ಹೇಳಿಕೆ ನೀಡಿದರು.