ಬೆಂಗಳೂರಿನ ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಬಳಿ ಗಂಡನೊಬ್ಬ ಹೆಂಡತಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಗುಂಡೇಟು ತಗುಲಿದ ಪತ್ನಿ ಭುವನೇಶ್ವರಿಯನ್ನು ಪತಿ ಬಾಲಮುರುಘನ್ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಅಸು ನೀಗಿದ್ದಾರೆ.
ಪತಿ ಪತ್ನಿ ನಡುವೆ ಕೋರ್ಟ್ನಲ್ಲಿ ಡಿವೋರ್ಸ್ ಕೇಸ್ ನಡೆಯುತ್ತಿತ್ತು, ಮೊನ್ನೆ ಇಬ್ಬರೂ ವಿಚಾರಣೆಗೆ ಹಾಜರಾಗಿ ಬಂದಿದ್ದರು. ಬಳಿಕ ಜಗಳ ಶುರುವಾಗಿ ತಾರಕಕ್ಕೇರಿ ಗಂಡ ಗನ್ ತೆಗೆದುಕೊಂಡು ಶೂಟ್ ಮಾಡಿದ್ದಾನೆ. ಈ ದಂಪತಿ ಸೇಲಂನವರಾಗಿದ್ದು, ಬಾಲಮುರುಘನ್ ಪತ್ನಿಯನ್ನು ಕೊಲೆ ಕೊಲೆ ಮಾಡುವ ಊದ್ದೇಶದಿಂದಲೇ ಗನ್ ತಂದಿದ್ದ ಶಂಕೆ ವ್ಯಕ್ತವಾಗಿದ್ದು, ಮೂರು ಸುತ್ತು ಗುಂಡು ಹಾರಿಸಿದ್ದ.
ಕ್ಯಾಪ್ ಜೆಮಿನಿ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬಾಲಮುರುಘನ್ ರಾಜೀನಾಮೆ ನೀಡಿದ್ದ, ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ಒಂದುವರೆ ವರ್ಷದಿಂದ ದಂಪತಿ ದೂರವಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
14 ವರ್ಷಗಳ ಹಿಂದೆ ಇವರ ಮದುವೆ ಆಗಿತ್ತು, ಗಂಡನಿಗೆ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ಭುವನೇಶ್ವರಿ ಪ್ರತ್ಯೇಕ ವಾಸವಿದ್ದರು. ರಾಜಾಜಿನಗರದಲ್ಲಿ ಮಕ್ಕಳೊಂದಿಗೆ ಭುವನೇಶ್ವರಿ ವಾಸ ವಿದ್ದರು.
ವಾರದ ಹಿಂದೆ ಭುವನೇಶ್ವರಿ ಬಾಲಮುರುಘನ್ಗೆ ಡಿವೋರ್ಸ್ ನೋಟಿಸ್ ಕಳಿಸಿದ್ದರು. ಅದೇ ಕೋಪದಲ್ಲಿ ಪತ್ನಿಯ ಮನೆ ಹುಡುಕಿಕೊಂಡು ಬಂದಿದ್ದ ಗಂಡ ಆಕೆಯ ಕೊಲೆ ಮಾಡಲೆಂದು ಗನ್ ತಂದಿದ್ದ. ಪತ್ನಿ ಕೆಲಸ ಮುಗಿಸಿ ಮನೆಗೆ ಬರುವುದನ್ನು ಕಾಯುತ್ತಿದ್ದು, ಬರುತ್ತಿದ್ದಂತೆ ಹಿಂಬಾಲಿಸಿ ಗನ್ ಫೈರ್ ಮಾಡಿದ್ದಾನೆ.
ಪತ್ನಿಯ ಹತ್ಯೆ ಬಳಿಕ ಆರೋಪಿ ಪೊಲೀಸ್ಗೆ ಶರಣಾಗಿದ್ದಾನೆ. ಶೂಟೌಟ್ ಮಾಡಲು ಬಳಸಿದ ಪಿಸ್ತೂಲ್ ಆತನಿಗೆ ಸಿಕ್ಕಿದ್ದು ಹೇಗೆ, ಪಿಸ್ತೂಲ್ ಲೈಸೆನ್ಸ್ ಪಡೆಯಲಾಗಿತ್ತಾ, ಅಕ್ರಮವಾಗಿ ಪಿಸ್ತೂಲ್ ಖರೀದಿಸಿ ಕೃತ್ಯಕ್ಕೆ ಬಳಸಲಾಗಿದೆಯಾ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೇಲ್ನೊಟಕ್ಕೆ ಲೈಸೆನ್ಸ್ ಇದ ಗನ್ ಎಂಬುದು ಗೊತ್ತಾಗಿದೆ.


