Menu

ಹೊಸ ವರ್ಷದಂದು ಅದಮ್ಯ ಚೇತನದಿಂದ ಸಂಕಲ್ಪ, ಸ್ಟೀಲ್ ಡಬ್ಬಿ, ಬಾಟಲ್ ವಿತರಣೆ

adamya chetana

ಬೆಂಗಳೂರು: ಅದಮ್ಯ ಚೇತನ ಮತ್ತು ಅನಂತಕುಮಾರ ಪ್ರತಿಷ್ಠಾನದ ವತಿಯಿಂದ ಲಾಲ್ ಬಾಗ್ ರಸ್ತೆಯಲ್ಲಿರುವ ಅನಂತಸ್ಮೃತಿ ವನದಲ್ಲಿ ನಾಡು-ನುಡಿಗಾಗಿ ಸಂಕಲ್ಪ ಕಾರ್ಯಕ್ರಮ ಮತ್ತು ಸಾಮೂಹಿಕ ವಂದೇ ಮಾತರಂ ಗಾಯನ ಕಾರ್ಯಕ್ರಮ ಜನವರಿ 1 ರಂದು ನಡೆಯಿತು.

ಅನಂತಕುಮಾರ ಪ್ರತಿಷ್ಠಾನದ ಟ್ರಸ್ಟಿ  ಪ್ರದೀಪಕುಮಾರ, ನೆರೆದಿದ್ದ ನೂರಾರು ಜನಸಮೂಹಕ್ಕೆ ಸಾಮೂಹಿಕ ಸಂಕಲ್ಪ ಮತ್ತು ವಯಕ್ತಿಕ ಸಂಕಲ್ಪ ಬೋಧಿಸಿದರು.

2000ನೇ ವರ್ಷದ ಪ್ರಾರಂಭದಲ್ಲಿ ಅನಂತಕುಮಾರ ಅವರಿಂದ ಪ್ರಾರಂಭವಾದ ಅಖಂಡ ವಂದೇಮಾತರಂ ಗಾಯನದ 25ನೇ ವರ್ಷ ಸಂದರ್ಭದಲ್ಲಿ ನಾಡು, ನುಡಿ, ನೆಲ, ಜಲದ ರಕ್ಷಣೆಯ ಹೊಣೆ ಹೊರುವ ಸಂಕಲ್ಪ ಮಾಡಲಾಯಿತು.  ನಿತ್ಯವೂ ಗೀತೆಯ ಕನಿಷ್ಠ 2 ಶ್ಲೋಕದ ಅರ್ಥಸಹಿತ ಪಠಣ ಮತ್ತು ಏಕ ಬಳಕೆ ಪ್ಲಾಸ್ಟಿಕ್ವನ್ನು ಸಂಪೂರ್ಣವಾಗಿ ತ್ಯಜಿಸುವ ಸಂಕಲ್ಪ ಕೈಗೊಳ್ಳಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಅದಮ್ಯ ಚೇತನ ಮತ್ತು ಅನಂತಕುಮಾರ ಪ್ರತಿಷ್ಠಾನದ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ, ಅದಮ್ಯ ಚೇತನವು 4 ಕೇಂದ್ರಗಳ ಮೂಲಕ ನಿತ್ಯ 1.60 ಲಕ್ಷ ಜನರಿಗೆ ನಿತ್ಯ ಬಿಸಿಯೂಟ ನೀಡುತ್ತಿದೆ. ತ್ಯಾಜ್ಯ ಮುಕ್ತ ಯೋಜನೆಯಲ್ಲಿ 35 ಪ್ಲೇಟ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಸಂಖ್ಯೆ ಇನ್ನೆರೆಡು ತಿಂಗಳಲ್ಲಿ 50 ಆಗಲಿದೆ. ಸಾರ್ವಜನಿಕರು ಸಮಾರಂಭಗಳಿಗೆ ಉಚಿತವಾಗಿ ತಟ್ಟೆಲೋಟ ಪಡೆದು ಮರಳಿಸಬಹುದು ಎಂದರು.

ಅದಮ್ಯ ಚೇತನದಿಂದ 522 ಹಸಿರು ಭಾನುವಾರ ಪರಿಕ್ರಮ ನಡೆದಿದ್ದು, ಈ ಸಂದರ್ಭ ಹಸಿರು ಸೇನಾನಿಗಳನ್ನು ಗೌರವಿಸಲಾಯಿತು. ಈ ಸಂದರ್ಭ ಸ್ವಚ್ಛತಾ ಕಾರ್ಮಿಕ ಮಹಿಳೆಯರಿಗೆ ಸ್ಟೀಲ್ ಊಟದ ಡಬ್ಬಿ, ಸ್ಟೀಲ್ ಬಾಟಲ್, ಬಟ್ಟೆಯ ಚೀಲ ವಿತರಿಸಲಾಯಿತು.

ವಂದೇ ಮಾತರಂ ಗಾಯನದಲ್ಲಿ ಪದ್ಮನಿ ಓಕ್, ಸಂಗೀತಾ ಕಟ್ಟಿ ತಂಡದವರು ವೇದಿಕೆಯಲ್ಲಿ ಹಾಡಿದರೆ, ಗಣ್ಯರು, ಸಾರ್ವಜನಿಕರು ಅವರ ಗಾಯನಕ್ಕೆ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಆನಂತಕುಮಾರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ ಪಿ.ವಿ. ಕೃಷ್ಣ ಭಟ್, ಶಾಸಕ ಉದಯ್ ಗರುಡಾಚಾರ್ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *