ಮುಂಬೈ: ಬಾಲಿವುಡ್ ನಟ ದಿಶಾ ಪಟಾನಿ ಸೋದರಿ ಮಹಡಿಯ ಮೇಲೆ ಸಿಲುಕಿದ್ದ 10 ತಿಂಗಳ ಹಸುಗೂಸನ್ನು ಯಾವುದೇ ರಕ್ಷಣೆ ಇಲ್ಲದೇ ಗೋಡೆ ಏರಿ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಾಲಿವುಡ್ ನಟಿ ದಿಶಾ ಪಟಾನಿ ಸೋದರಿ ಹಾಗೂ ಭಾರತೀಯ ಸೇನಾಪಡೆಯಲ್ಲಿ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಿದ್ದ ಮಾಜಿ ಯೋಧೆ ಕೂಡ ಆಗಿರುವ ಖುಷ್ಬೂ ಪಟಾನಿ ಮಹಡಿಯ ಅನಾಥವಾಗಿ ಬಿಟ್ಟು ಹೋಗಿದ್ದ ಮಗುವನ್ನು ರಕ್ಷಿಸಿದ್ದಾರೆ. ಈಕೆಯ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.
ಖುಷ್ಬೂ ಪಟಾನಿ ತನ್ನ ತಂದೆ ನಿವೃತ್ತ ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಅವರ ಜೊತೆ ಉತ್ತರ ಪ್ರದೇಶದ ಬರೇಲಿಯಲ್ಲಿ ವಾಸವಾಗಿದ್ದಾರೆ.
ಭಾನುವಾರ ಬೆಳಿಗ್ಗೆ ವಾಕಿಂಗ್ ಹೋಗುವಾಗ ಪಾಳುಬಿದ್ದ ಮನೆಯ ಬಳಿ ಮಗು ಅಳುವುದನ್ನು ಕೇಳಿದ ಖುಷ್ಬೂ ಪಟಾನಿ ಎಲ್ಲಿಂದ ಧ್ವನಿ ಬರುತ್ತಿದೆ ಎಂದು ಹುಡುಕಿದ್ದಾರೆ.
ಮನೆಯ ಬಳಿ ಹೋದಾಗ ಮನೆ ಮೇಲೆ ಹೋಗಲು ಯಾವುದೇ ನೆರವು ಇರಲಿಲ್ಲ. ಆದರೆ ಹಿಂದೆ ಮುಂದೆ ನೋಡದೇ ಖುಷ್ಬೂ ಗೋಡೆಯನ್ನು ಯಾವುದೇ ಸಹಾಯವಿಲ್ಲದೇ ಏರಿ ಮಗುವನ್ನು ರಕ್ಷಿಸಿದ್ದಾರೆ.
ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಿಸಿಲಿಗೆ ಮಗುವಿನ ಕಣ್ಣಿಗೆ ಹಾನಿಯಾಗಿದ್ದು, ಮೈಮೇಲೆ ಸಾಕಷ್ಟು ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವನ್ನು ಪೋಷಕರು ಪಾಳುಬಿದ್ದ ಮನೆಯ ಮೇಲೆ ಬಿಟ್ಟು ಹೋಗಿದ್ದರು. ಇದರಿಂದ ಅನಾಥವಾಗಿದ್ದ ಮಗು ರಕ್ಷಣೆ ಇಲ್ಲದೇ ಅಳುತ್ತಿತ್ತು. ಖುಷ್ಬೂ ಪಟಾನಿ ಯಾವುದೇ ಸಹಾಯ ಇಲ್ಲದೇ ಮಹಡಿ ಏರಿ ಮಗುವನ್ನು ರಕ್ಷಿಸಿದ್ದಾರೆ.
ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಕ್ಕಪಕ್ಕದಲ್ಲಿ ಇರುವ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಪೊಲೀಸರು ಪರಿಶೀಲನೆ ನಡೆಸಿ ಪೋಷಕರ ಪತ್ತೆ ಕಾರ್ಯ ನಡೆಸಿದ್ದಾರೆ.