ಕೊಪ್ಪದ ಹರಿಹರಪುದಲ್ಲಿ ಚಿತ್ರೀಕರಣದ ವೇಳೆಯೇ ‘ಪಾತ್ರಧಾರಿ’ ಸಿನಿಮಾದ ನಿರ್ದೇಶಕ ಸಂಗೀತ್ ಸಾಗರ್ ಕುಸಿದು ಮೃತಪಟ್ಟಿದ್ದಾರೆ. ನಿರ್ದೇಶಕ ಸಂಗೀತ್ ಸಾಗರ್ ಅವರ ಮೃತದೇಹ ನಿನ್ನೆ ರಾತ್ರಿಯಿಂದ ಆಸ್ಪತ್ರೆಯ ಶವಾಗಾರದಲ್ಲಿದೆ. ಈವರೆಗೆ ಖಾಸಗಿ ಆಸ್ಪತ್ರೆಯ ಬಿಲ್ ಪಾವತಿಯಾಗಿಲ್ಲ.
ಸಿನಿಮಾ ತಂಡದವರು ಬಿಲ್ ಪಾವತಿಸುತ್ತಾರೆ ಎಂದು ಆಸ್ಪತ್ರೆಯಲ್ಲಿರುವ ನಿರ್ದೇಶಕ ಸಂಗೀತ್ ಸಾಗರ್ ಕುಟುಂಬಸ್ಥರು ಕಾಯುತ್ತಿದ್ದಾರೆ. ಪತ್ನಿ ಸುಶ್ಮಿತಾ, ಮಗಳು ವಂಧ್ಯಾ ಕೂಡ ಅಲ್ಲಿದ್ದಾರೆ. ಚಿತ್ರತಂಡ ಬಂದ ಬಳಿಕ ಮೃತದೇಹ ಕೊಂಡೊಯ್ಯುವ ಸಾಧ್ಯತೆ ಇದೆ.
ಈ ಮೊದಲು ‘ಸ್ನೇಹಿತ’ 2021ರಲ್ಲಿ ರಿಲೀಸ್ ಆಗಿತ್ತು, ‘ಓ ಪ್ರೀತಿಯಾ’ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಕೆಲವು ಸಿನಿಮಾಗಳಿಗೆ ಸಂಗೀತ ಸಂಯೋಜಕನಾಗಿ ಕೆಲಸ ಮಾಡಿದ್ದಾರೆ. ಕೊಪ್ಪದ ಹರಿಹರಪುದಲ್ಲಿ ನಡೆಯುತ್ತಿದ್ದ ಶೂಟಿಂಗ್ನಲ್ಲಿ ಸಂಗೀತ್ ಸಾಗರ್ ಭಾಗಿಯಾಗಿದ್ದರು. ಈ ವೇಳೆ ಎದೆ ಚುಚ್ಚಿಂತಾಗುತ್ತದೆ ಎಂದು ಹೇಳಿದ ಕೂಡಲೇ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆ ನೀಡಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಅಸು ನೀಗಿದ್ದಾರೆ.
ಸಂಗೀತ್ ಸಾಗರ್ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಸ್ನೇಹಿತ, ಕೋಟೆ ಹುಡುಗರು ಚಿತ್ರಗಳನ್ನು ನಿರ್ದೇಶಿಸಿದ್ದರು. ಕೊನೆಯದಾಗಿ ಪಾತ್ರಧಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದರು. ಕೊಂಚ ಸುಸ್ತಾದ ಹಿನ್ನೆಲೆಯಲ್ಲಿ ರಿಲಾಕ್ಸ್ ಮಾಡಲು ಕುಳಿತುಕೊಂಡಿದ್ದರು. ಒಳಗಡೆ ಹೋದಾಗ ಮೈ ಬೆವರಲು ಪ್ರಾರಂಭಿಸಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹರಿಹರಪುರದಿಂದ ಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಂದ ಶಿವಮೊಗ್ಗಕ್ಕೆ ಕರೆದುಕೊಂಡು ಹೋದೆವು. ಶಸ್ತ್ರಚಿಕಿತ್ಸೆ ಮಾಡುವಾಗ ಅಸು ನೀಗಿದರು ಎಂದು ನಿರ್ಮಾಪಕ ಡೇವಿಡ್ ತಿಳಿಸಿದ್ದಾರೆ.


