ಮಥುರಾದ ವೃಂದಾವನ ಸಮೀಪದ ಕಾಲೊನಿಯಲ್ಲಿ ಭಾರತದ ಪ್ರಮುಖ ಬ್ರ್ಯಾಂಡ್ ದಿನೇಶ್ 555 ಬೀಡಿಯ ಮಾಲೀಕ ಹಾಗೂ ತಂದೆ ಸುರೇಶ್ ಚಂದ್ ಅವರನ್ನು ಮಗ ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಡಿತದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಸುರೇಶ್ ಚಂದ್ 1977ರಲ್ಲಿ ಕಂಪನಿಯನ್ನು ಕಟ್ಟಿದ್ದರು. ಸುರೇಶ್ ಚಂದ್ ಅಗರ್ವಾಲ್ ತಮ್ಮ ಬಹುಕೋಟಿ ಮೌಲ್ಯದ ಬೀಡಿ ವ್ಯವಹಾರವನ್ನು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಿಗೆ ವಿಸ್ತರಿಸಿದ್ದರು.ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಮಗ ನರೇಶ್ ಅಗರ್ವಾಲ್ಗೆ ಕುಡಿತದ ಚಟವಿತ್ತು. ಈ ಕಾರಣಕ್ಕೆ ನಿತ್ಯವೂ ತಂದೆ–ಮಗನ ನಡುವೆ ಗಲಾಟೆ ನಡೆಯುತ್ತಿತ್ತು.
ಸುರೇಶ್ ಚಂದ್ ಹಾಗೂ ನರೇಶ್ ಅಗರ್ವಾಲ್ ನಡುವೆ ಗಲಾಟೆ ನಡೆದು ಕೋಪದಿಂದ ನರೇಶ್ ತಂದೆಗೆ ಗುಂಡು ಹಾರಿಸಿದ್ದಾನೆ. ಬಳಿಕ ಭಯದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.


